ಕೆಳಗಿನ ಪ್ರಸಂಗವನ್ನು ಓದಲು ಸುಂದರವಾಗಿದೆ:
ಒಬ್ಬ ವ್ಯಕ್ತಿಯು ಸುಂದರವಾದ ಕನ್ಯೆಯನ್ನು ವಿವಾಹವಾದ. ಅವಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಸ್ವಲ್ಪ ದಿನಗಳ ನಂತರ ಅವಳನ್ನು ಚರ್ಮರೋಗವು ಬಾಧಿಸತೊಡಗಿತು. ನಿಧಾನವಾಗಿ ಅವಳು ತನ್ನ ಸೌಂದರ್ಯವನ್ನು ಕಳೆದುಕೊಳ್ಳತೊಡಗಿದಳು. ಹಲವು ದಿನಗಳ ನಂತರ ಅವಳ ಪತಿಯು ಬೇರೆ ಊರಿಗೆ ಕೆಲಸದ ಮೇಲೆ ಹೊರಟನು. ಮರಳಿ ಬರುವ ಹಾದಿಯಲ್ಲಿ ಅವನು ಒಂದು ಅಪಘಾತಕ್ಕೆ ತುತ್ತಾಗಿ
ತನ್ನ ದೃಷ್ಟಿಯನ್ನು ಕಳೆದುಕೊಂಡನು. ಹೀಗಿದ್ದರೂ ಸಹ ಅವರ ದಾಂಪತ್ಯಜೀವನವು ಅತ್ಯಂತ ಪ್ರೀತಿಯಿಂದಲೇ ಕಳೆಯುತ್ತಿತ್ತು. ಆದರೆ ದಿನಗಳು ಕಳೆಯುತ್ತಿದ್ದಂತೆ ಅವಳು ತನ್ನ ಸೌಂದರ್ಯವನ್ನು
ನಿಧಾನವಾಗಿ ಸಂಪೂರ್ಣವಾಗಿ ಕಳೆದುಕೊಂಡಳು. ಅಂಧನಾದ ಪತಿಗೆ ಇದಾವುದೂ ತಿಳಿಯುವ ಪರಿಸ್ಥಿತಿಯಲ್ಲಿರಲಿಲ್ಲ ಆದರೆ ಅವರ ವೈವಾಹಿಕ ಜೀವನವು
ಮೊದಲಿನಷ್ಟೇ ಪ್ರೀತಿಯಿಂದ ಸಾಗುತ್ತಿತ್ತು. ಇಬ್ಬರೂ ಪರಸ್ಪರ ಅತ್ಯಂತ ಪ್ರೀತಿಯಿಂದಲೇ
ಇರುತ್ತಿದ್ದರು. ಒಂದು ದಿನ ಅವಳು ಸಾವಿಗೀಡಾದಳು. ಅವಳ ಸಾವು
ಅವನಿಗೆ ಅಪಾರ ನೋವನ್ನು ತಂದಿತು. ಅವನು ತನ್ನ ಪತ್ನಿಯ ಅಂತ್ಯಕ್ರಿಯೆಗಳನ್ನು ಮುಗಿಸಿ ನಂತರ ಊರನ್ನು
ತ್ಯಜಿಸಲು ತೀರ್ಮಾನಿಸಿದನು. ಆ ಸಂದರ್ಭದಲ್ಲಿ ನೆರೆಮನೆಯ ವ್ಯಕ್ತಿಯು
“ಈಗ ನೀನು ಹೇಗೆ ಒಬ್ಬನೇ ನಡೆದು ಹೋಗುತ್ತೀಯಾ?
ಇಲ್ಲಿಯವರೆಗೂ ನಿನ್ನ ಹೆಂಡತಿಯು ನಿನಗೆ ಸಹಾಯ ಮಾಡುತ್ತಿದ್ದಳಲ್ಲವೇ?” ಎಂದು ಕೇಳಿದನು.
ಅದಕ್ಕೆ ಆತನು -
“ನಾನು ಅಂಧನಾಗಿರಲೇ
ಇಲ್ಲ!
ನಾನು ಹಾಗೆ ನಾಟಕ ಮಾಡುತ್ತಿದ್ದೆ.
ಏಕೆಂದರೆ ಅವಳಿಗೆ ನಾನು ಅಂಧನಲ್ಲ ಎಂದು ಗೊತ್ತಾಗಿದ್ದಿದ್ದರೆ ಅವಳು
ತಾನು ಅನುಭವಿಸುತ್ತಿದ್ದ ರೋಗದಿಂದ
ಆಗುವ ನೋವಿಗಿಂತ ಹೆಚ್ಚು ನೋವನ್ನು ಅನುಭವಿಸುತ್ತಿದ್ದಳು. ಹಾಗಾಗಿ ನಾನು ಅಂಧನಂತೆ ವರ್ತಿಸುತ್ತಿದ್ದೆ.
ಅವಳು ನನ್ನ ಪ್ರೀತಿಯ ಪತ್ನಿ ಹಾಗೂ ಅಪಾರ ಪ್ರೀತಿಯನ್ನು ನನಗೆ ನೀಡುತ್ತಿದ್ದಳು. ನನ್ನ ಒಂದೇ ಉದ್ದೇಶವೆಂದರೆ ಅವಳನ್ನು
ಸಂತೋಷದಲ್ಲಿಡುವುದಾಗಿತ್ತು”.
ಮೆಳ್ತಿಳಿಸಿದ ಪ್ರಸಂಗದ ನೀತಿಯೇನೆಂದರೆ:
“ಕೆಲವು ಬಾರಿ ನಾವು ನಮ್ಮೊಡನೆ ಇರುವವರ ಕುಂದು ಕೊರತೆಗಳನ್ನು ಕಡೆಗಣಿಸುವ
ಉದ್ದೇಶದಿಂದ ಅವುಗಳನ್ನು ನಿರ್ಲಕ್ಷಿಸಿ ಸಂತೋಷವಾಗಿರಲು
ಕಣ್ಣಿಲ್ಲದವರಂತೆ ನಿರ್ಲಕ್ಷಿಸಬೇಕಾಗುತ್ತದೆ”.
“ನಮ್ಮ ಬಾಯಲ್ಲಿರುವ
ಹಲ್ಲುಗಳು ಎಷ್ಟುಬಾರಿ ನಾಲಿಗೆಯನ್ನು
ಕಚ್ಚಿದರೂ ಅವೆರಡೂ ಒಂದೇ ಬಾಯಿಯಲ್ಲಿ ಇರುತ್ತವೆ”.
ಅದೇ ಕ್ಷಮೆಯ ಮನೋಭಾವ.
ನಮ್ಮಲ್ಲಿರುವ ಎರಡು ಕಣ್ಣುಗಳು ಒಂದನ್ನೊಂದು ವೀಕ್ಷಿಸಲಾಗದಿದ್ದರೂ
ಅವುಗಳು ತಮ್ಮ ಮುಂದಿರುವ ವಸ್ತುಗಳನ್ನು ಒಟ್ಟಾಗಿ ನೋಡುತ್ತವೆ, ಒಟ್ಟಾಗಿ ರೆಪ್ಪೆಗಳನ್ನು ಮಿಟುಕಿಸುತ್ತವೆ. ಅದೇ ಏಕತೆ.
ಭಗವಂತನು ನಮೆಲ್ಲರಿಗೂ ಪರಸ್ಪರ ಕ್ಷಮಿಸುವ ಹಾಗೂ ಒಟ್ಟಾಗಿ ಬಾಳುವ
ಮನೋಭಾವವನ್ನು ಕರುಣಿಸಲೆಂದು ಪ್ರಾರ್ಥಿಸೋಣವೇ?
ಅ. ಒಬ್ಬಂಟಿಯಾಗಿ ಏನನ್ನಾದರೂ
ಅಂದುಕೊಳ್ಳಬಹುದು ಆದರೆ ಜೊತೆಯಾಗಿ ನಾವುಗಳು ಮಾತನಾಡಬಹುದು.
ಆ. ಒಂಟಿಯಾಗಿ ನಾನು ಸಂತೋಷಿಸಬಹುದು
ಆದರೆ ಜೊತೆಯಾಗಿ ನಾವುಗಳು ಆಚರಿಸಬಹುದು.
ಇ. ಒಂಟಿಯಾಗಿ ನಾನು ಮುಗುಳ್ನಗಬಹುದು, ಆದರೆ ಜೊತೆಯಾಗಿ ನಾವು ನಗಬಹುದು.
ಅದೇ ಮನುಷ್ಯ ಸಂಬಂಧಗಳ ಸೌಂದರ್ಯ. ಪರಸ್ಪರ ಸಹಕಾರವಿಲ್ಲದೇ ನಾವು ಏನೂ ಅಲ್ಲ.
ಚೂಪಾದ ಚಾಕುವು ಮರವನ್ನು ಕಡಿಯಲಾಗದು ಹಾಗೇ ಹರಿತವಾದ ಕೊಡಲಿಯು
ಕೂದಲನ್ನು ಕತ್ತರಿಸಲಾಗದು.
ನೀತಿ:
ಪ್ರತಿಯೊಬ್ಬರೂ ಅವರವರ ವಿಶೇಷವಾದ ವ್ಯಕ್ತಿತ್ತ್ವದೊಂದಿಗೆ/ ಉದ್ದೇಶದೊಂದಿಗೆ ಪ್ರಾಮುಖ್ಯರೇ! ಯಾರನ್ನೂ ಅವರು ಧರಿಸಿರುವ ಪಾದರಕ್ಷೆಗಳನ್ನು ಮೆಚ್ಚುವಉದ್ದೇಶವನ್ನು
ಹೊರತುಪಡಿಸಿ ಕೆಳಗಡೆ ದೃಷ್ಟಿಸಬೇಡಿ.
ಸಂಪಾದಕರು - ಗುರುಪ್ರಸಾದ್ ಹಾಲ್ಕುರಿಕೆ.
No comments:
Post a Comment