ನಮ್ಮ ಶರೀರದಲ್ಲಿನ ಚಕ್ರಗಳ ಬಗೆಗೆ ಅರಿವು
ಲಕ್ಷಣ ನಿರೂಪಣೆ :
ಚಕ್ರ ಪದವು ಸಂಸ್ಕೃತ
ಭಾಷೆಯಿಂದ ಬಂದದ್ದು. ಚಕ್ರ ಅಂದರೆ ಗಾಲಿ. ಯೋಗ ಪದ್ಧತಿಯಂತೆ ಮನುಷ್ಯನ ಶರೀರದಲ್ಲಿನ ಏಳು ಸ್ಥಳಗಳಲ್ಲಿ
ಒಂದು. ಪ್ರತಿಯೊಂದು ಶಾರೀರಿಕ
ಕ್ರಿಯೆ ಮತ್ತು ಭಾವನಾತ್ಮಕ ಅನುಭವಗಳು ನಿರ್ದಿಷ್ಟ ಹೊಣೆಯರಿತ ಗಾಲಿಯ ಕಡ್ಡಿಗಳಂತಿರುವುದು. ಶರೀರದ ಅತಿಮುಖ್ಯವಾದ ಸ್ವಾಸ್ಥ್ಯ ಹಾಗೂ ಭಾವನಾತ್ಮಕ ಸುಸ್ಥಿತಿಗಾಗಿ, ಚಕ್ರಗಳ ಮುಕ್ತ ಹಾಗೂ ಆಬಾಧಿತವಾಗಿ ಹರಿಯುವುದಕ್ಕೆ ಯೋಗ ಮತ್ತು
ಧ್ಯಾನಗಳು ಮಾರ್ಗಗಳು.
ಚಕ್ರಗಳು ಶರೀರದ ಸೂಕ್ಷ್ಮ
ಅಂಶಗಳಾಗಿ, ಸ್ಪರ್ಶರಹಿತ ಸ್ಥಿತಿಯಲ್ಲಿ
ಸಾಮರಸ್ಯದಿಂದ ಕೆಲಸ ಮಾಡುತ್ತಾ ದೈವೀ ಶಕ್ತಿಯನ್ನು ಶರೀರದಾದ್ಯಂತ ಹರಿಸುವುದು ಹಾಗೂ ಶಾರೀರಿಕ ಮತ್ತು
ಭಾವನಾತ್ಮಕ ಆರೋಗ್ಯವನ್ನು ನಿಯಂತ್ರಿಸುವುದು.
ಏಳು ಚಕ್ರಗಳು ಹಾಗೂ
ಅವುಗಳು ಪ್ರತಿನಿಧಿಸುವ ಮಾನವ ಗುಣಗಳು ಹೀಗಿವೆ:
●
ಮೂಲಾಧಾರ ಚಕ್ರ - ಮೂಲ ನಂಬಿಕೆ
●
ಸ್ವಾಧಿಷ್ಠಾನ (ಗುಲ್ಮ ಅಥವಾ ಪವಿತ್ರ ಚಕ್ರ) - ಲೈಂಗಿಕತೆ ಮತ್ತು ಸೃಷ್ಟಿ
●
ಮಣಿಪೂರ (ನಾಭಿ ಅಥವಾ ಸೌರ ಚಕ್ರ) - ಶಕ್ತಿ
●
ಅನಾಹತ (ಹೃದಯ ಚಕ್ರ) - ಚಿಕಿತ್ಸೆ ಮತ್ತು ಪ್ರೀತಿ
●
ವಿಶುದ್ಧ (ಗಂಟಲಿನ ಚಕ್ರ) - ಅಭಿವ್ಯಕ್ತಿ
●
ಅಜ್ಞಾ (ಮೂರನೇ ಕಣ್ಣಿನ ಚಕ್ರ) - ಸ್ಫೂರ್ತಿ, ತಿಳುವಳಿಕೆ ಮತ್ತು ಅಂತಃಪ್ರಜ್ಞೆ
●
ಸಹಸ್ರಾರ (ಕಿರೀಟ ಚಕ್ರ) - ಆಧ್ಯಾತ್ಮಿಕತೆ ಮತ್ತು ಜ್ಞಾನೋದಯ
ಇವುಗಳನ್ನು ಶಕ್ತಿಯ
ತಿರುಗುವ ಚಕ್ರವನ್ನಾಗಿ ಅದು ನಿಧಾನವಾಗಿ, ಜಡವಾಗಿ ಅಥವಾ ನಿರ್ಬಂಧಿಸಿರುವಂತೆ ಒಳಗಣ್ಣಿನಿಂದ ನೋಡಬಹುದು. ಈ ಚಕ್ರಗಳಲ್ಲಿ ಶಕ್ತಿಯು ಮುಕ್ತವಾಗಿ ಹರಿಯುವ ಸಾಮರ್ಥ್ಯವು
ನಮ್ಮ ದೈಹಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ
ಸ್ಥಿತಿಗಳ ಮೇಲೆ ಪ್ರಭಾವ ಬೀರುವುದು. ನಮ್ಮಲ್ಲಿನ ಶಕ್ತಿ, ದೈಹಿಕ ಸಂವೇದನೆ ಮತ್ತು ಭಾವನಾತ್ಮಕ ಸ್ಥಿತಿಗಳ ಬಗ್ಗೆ ಅರಿವನ್ನುಂಟುಮಾಡಿಕೊಂಡು ಚಕ್ರಗಳ
ನಿರ್ಬಂಧಗಳ ಅರಿವನ್ನು ಕಂಡುಕೊಳ್ಳಬಹುದು.
ಚಕ್ರಗಳ ಸಮತೋಲನವನ್ನು
ಯಾವ ಪರಿಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಹೇಗೆ ಅರಿವನ್ನುಂಟುಮಾಡಬಹುದು ಎಂಬುದನ್ನು
ಮುಂದಿನ ಸಾಲುಗಳಲ್ಲಿ ಅರಿಯೋಣ. ಇದನ್ನು ಅರಿಯಲು ಮೊದಲಿಗೆ ನಮಗೆ ಈ ಚಕ್ರಗಳ ಕ್ರಿಯೆಗಳು ಹಾಗೂ ಯಾವ ರೀತಿಯ ಧ್ಯಾನ, ಆಸನ ಮತ್ತು ದೃಶ್ಶೀಕರಣಗಳ ಅಭ್ಯಾಸವು ಅವುಗಳ ಸಮತೋಲನವನ್ನು
ಕಾಯ್ದುಕೊಳ್ಳಬಹುದು ಎಂಬುದರ ಬಗ್ಗೆ ಅರಿವಾಗಬೇಕು.
ಯಾವ ಚಕ್ರಕ್ಕೆ ಸಮತೋಲನತೆ ಬೇಕು ಎಂಬುದನ್ನು ಹೇಗೆ ಅರಿಯಬೇಕು?
ನೀವು ನಿಮ್ಮ ಭಾವನೆಗಳಲ್ಲಿನ
ತೊಂದರೆ ಅಥವಾ ಆರೋಗ್ಯದ ಬಗೆಗಿನ ಸಮಸ್ಯೆಗಳನ್ನು ಅನುಭವಿಸುತ್ತಿರುವಾಗ ಚಕ್ರವು ನಿರ್ಬಂಧಿತವಾಗಬಹುದು. ಪ್ರತಿಯೊಂದು ಚಕ್ರವೂ ದೇಹದ ನಿರ್ದಿಷ್ಟ ಭಾಗ ಹಾಗೂ ಇತರೆ ಭಾವನಾತ್ಮಕ
ಪ್ರಕ್ರಿಯೆಗಳಿಗೆ ಜವಾಬ್ದಾರಿಯಾಗಿರುವುದು.
ಮೂಲಾಧಾರ ಚಕ್ರವು ಬೆನ್ನೆಲುಬಿನ ಬುಡದಲ್ಲಿ ಇದ್ದು ಅದು ಮೂಲ ಅಸ್ಥಿತ್ವಕ್ಕೆ ಸಂಬಂಧಿಸಿದೆ. ಅದು ಸಮತೋಲನ ಸ್ಥಿತಿಯಲ್ಲಿಲ್ಲವಾದಲ್ಲಿ ಮನುಷ್ಯನು ಅರಕ್ಷಿತ
ಸ್ಥಿತಿಯನ್ನು ಅನುಭವಿಸುವನು. ಇದು ಅವನ ಭಾವೋದ್ವೇಗದಲ್ಲಿನ ತೊಂದರೆ ಮತ್ತು ಅವನು ತಿನ್ನುವ ಆಹಾರದಲ್ಲಿನ ಅವ್ಯವಸ್ಥೆ ಅಥವಾ
ಶರೀರದ ಕೆಳಭಾಗದಲ್ಲಿನ ನೋವುಗಳ ಮೂಲಕ ವ್ಯಕ್ತವಾಗುವುದು.
ಎರಡನೇ ಚಕ್ರ, ಸ್ವಾಧಿಷ್ಠಾನ - ಗುಲ್ಮ ಅಥವಾ ಪವಿತ್ರ ಚಕ್ರ :- ಈ ಚಕ್ರವು ನಮ್ಮ ಭಾವನೆ ಹಾಗೂ ಲೈಂಗಿಕತೆಗಳಿಗೆ ಸಂಬಂಧಿಸಿದ್ದು. ನೀವು ಸೃಜನಾತ್ಮಕ ಕ್ರಿಯೆಗಳಲ್ಲಿ, ಭಾವನಾತ್ಮಕ ಅಥವಾ ಲೈಂಗಿಕ ಅನುಭವಗಳಲ್ಲಿ ಸಮಸ್ಯೆಗಳನ್ನೆದುರಿಸುತ್ತಿದ್ದಲ್ಲಿ
ಈ ಚಕ್ರದ ಸಮತೋಲನದ ಅಗತ್ಯತೆ ಉಂಟಾಗಬಹುದು. ಸಮತೋಲನವಿಲ್ಲದಿದ್ದಲ್ಲಿ ಅದು ಅನೇಕ ವಿಧದ ವ್ಯಸನಗಳು, ಕ್ರಿಯಾತ್ಮಕ, ಸಂಬಂಧಗಳ, ಪರಸ್ಪರ ಅನ್ಯೋನ್ಯತೆ
ಅಥವಾ ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯದ ಬಗ್ಗೆ ತೊಂದರೆಗಳು ವ್ಯಕ್ತವಾಗುವುದು.
ಮಣಿಪೂರ ಅಥವಾ ನಾಭಿ ಮತ್ತು ಸೌರ ಚಕ್ರವು ನಮ್ಮ ವೈಯುಕ್ತಿಕ ಶಕ್ತಿಯನ್ನು ನಿಯಂತ್ರಿಸುತ್ತದೆ. ಇಚ್ಛಾಶಕ್ತಿಯ, ಅಧೈರ್ಯ ಅಥವಾ ಸ್ವಯಂ-ಪರಿಣಾಮಕಾರಿತ್ವಗಳ ಕೊರತೆಯಿದ್ದಲ್ಲಿ ಈ ಚಕ್ರದ ಸಮತೋಲನೆಯ ಅಗತ್ಯತೆ
ಇರುತ್ತದೆ.
ನಮ್ಮ ಹೃದಯಚಕ್ರ - ಅನಾಹತಚಕ್ರ. ನಾವು ಭಯಾಗ್ರಸ್ಥರಾದಾಗ, ಸಹಾನುಭೂತಿಯ ಕೊರತೆಯುಂಟಾದಾಗ ಹಾಗೂ ತನ್ನದನ್ನು ಬಿಟ್ಟುಕೊಡದಂತೆ
ವರ್ತಿಸುವಾಗ ಈ ಚಕ್ರವು ನಿರ್ಬಂಧಗೊಳ್ಳುವುದು. ಆಗ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಬಹುಷಃ ದೈಹಿಕ ಹೃದಯದ ಸ್ಥಿತಿಯೂ ಅನಾಹತ ಚಕ್ರದ ನಿರ್ಬಂಧಕ್ಕೆ ಸಂಬಂಧಿಸಿರಬಹುದು.
ವಿಶುದ್ಧ ಅಥವಾ ಗಂಟಲಿನ ಚಕ್ರವು ನಮ್ಮಲ್ಲಿನ ಧ್ವನಿಯನ್ನು ನಿಯಂತ್ರಿಸುತ್ತದೆ. ನಾವು ಬಹಳಷ್ಟು ತಪ್ಪಿತಸ್ಥ ಮನೋಭಾವನೆಯಿಂದ ಇದ್ದಲ್ಲಿ ಅಥವಾ
ನಾವು ಮಾತನಾಡಬೇಕಾದ ಸಮಯದಲ್ಲಿ ಮಾತನಾಡಲಾಗದಿದ್ದ ಪಕ್ಷದಲ್ಲಿ ಈ ಚಕ್ರದ ಸಮತೋಲನದ ಅಗತ್ಯತೆ ಕಂಡುಬರುವುದು.
ಈ ಚಕ್ರದ ಸಮತೋಲನತೆಯಲ್ಲಿ
ಏರುಪೇರಾದಾಗ ಅದು ದನಿಪೆಟ್ಟಿಗೆಯಲ್ಲಿನ ಉರಿಯೂತ ಅಥವಾ ಇತರೆ ಗಂಟಲಿನ ಅನಾರೋಗ್ಯದ ಮೂಲಕ ವ್ಯಕ್ತವಾಗುವುದು.
ಅಜ್ಞಾ ಚಕ್ರವನ್ನು ನಮ್ಮಲ್ಲಿನ ಮೂರನೇ ಕಣ್ಣಿನ ಸ್ಥಳವನ್ನಾಗಿ ಪರಿಗಣಿಸಿ ಹಾಗೂ ನಮ್ಮಲ್ಲಿನ ಅಂತಃಪ್ರಜ್ಞೆಗೆ
ಸಂಬಂಧಿಸಿರುವುದು. ನಮ್ಮಲ್ಲಿ ಅಂತಃಪ್ರಜ್ಞೆಯ
ಕೊರತೆಯುಂಟಾದಾಗ, ನಾವು ನಮ್ಮ ಅಂತರಂಗದ
ಧ್ವನಿಯನ್ನು ಮತ್ತು ಅದರ ಮಾರ್ಗದರ್ಶನವನ್ನು ಕೇಳಿಸಿಕೊಳ್ಳದೇ ಇರುವ
ಸ್ಥಿತಿಯಲ್ಲಿದ್ದಾಗ ಈ ಚಕ್ರವು ನಿರ್ಬಂಧಿಸಿರುವುದು.
ಏಳನೇ ಚಕ್ರವೇ ಸಹಸ್ರಾರ. ಇದು ನಮ್ಮ ತಲೆಯಲ್ಲಿನ ನೆತ್ತಿಯಲ್ಲಿರುವುದು ಹಾಗೂ ಇದು ನಮ್ಮ
ಮೂಲಕ್ಕೆ ಸಂಪರ್ಕವನ್ನು ಕಲ್ಪಿಸುವುದು. ನಾವು ನಮ್ಮಲ್ಲಿನ ಆಧ್ಯಾತ್ಮಿಕ ಸಾರದೊಂದಿಗೆ ಸಂಪರ್ಕ ಕಡಿದುಕೊಂಡಿರುವೆವು ಎಂದೆನಿಸಿದಾಗ
ಈ ಚಕ್ರದ ಸಮತೋಲನತೆಯ ಅಗತ್ಯವು ಕಂಡುಬರುವುದು. ಈ ಚಕ್ರದ ಅಸಮತೋಲನತೆಯು ನಮ್ಮಲ್ಲಿನ ದೈಹಿಕ ತೊಂದರೆಗಳಾದ ತಲೆನೋವು, ಮನೋವಿಕೃತ ಖಾಯಿಲೆ, ನರಗಳಲ್ಲಿನ ನೋವು ಅಥವಾ ಪಿನಿಯಲ್ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆಗಳ
ಮೂಲಕ ಕಂಡುಬರುವುದು.
ಚಕ್ರಗಳ ಸಮತೋಲನವನ್ನು ಕಾಪಾಡಿಕೊಳ್ಳುವ ಬಗ್ಗೆ
ಪ್ರತಿಯೊಂದು ಚಕ್ರದ
ಸಮತೋಲನತೆಯನ್ನು ಅನೇಕ ಮಾರ್ಗಗಳ ಮೂಲಕ ಕಾಪಾಡಿಕೊಳ್ಳಬಹುದು - ಧ್ಯಾನ, ದೃಢೀಕರಣ ಮಾರ್ಗ, ಬಣ್ಣಗಳ ಚಿಕಿತ್ಸೆ, ಮಂತ್ರವನ್ನು ಪುನರುಚ್ಚರಿಸುವುದು ಹಾಗೂ ದೈಹಿಕ ಆಸನಗಳು. ಬಣ್ಣಗಳ ಚಿಕಿತ್ಸೆಯಲ್ಲಿ ಬಣ್ಣ ಬಣ್ಣದ ಆಹಾರವನ್ನು ಸೇವಿಸುವುದು, ಬಣ್ಣದ ವಸ್ತ್ರಗಳನ್ನು ಧರಿಸುವುದು, ಬಣ್ಣದ ಕಲ್ಲುಗಳ ಜೊತೆ ಕೆಲಸ ಮಾಡುವುದು, ಹರಳುಗಳು ಅಥವಾ ಬೆಳಕುಗಳು ಹಾಗೂ ಧ್ಯಾನದಲ್ಲಿ ಬಣ್ಣಗಳನ್ನು
ಕಂಡುಕೊಳ್ಳುವುದು. ಪ್ರತಿಯೊಂದು ಚಕ್ರಕ್ಕೂ
ಅದರದೇ ಆದ ಬಣ್ಣ ಹಾಗೂ ಬೀಜ ಶಬ್ದ ಅಥವಾ ಬೀಜ ಮಂತ್ರವಿರುವುದು. ಬೀಜ ಮಂತ್ರದ ಕಂಪನವು ನಿರ್ದಿಷ್ಟ ಚಕ್ರವನ್ನು ಉತ್ತೇಜಿಸುವುದು. ಈ ಮಂತ್ರವನ್ನು ಸತತವಾಗಿ ಪುನರುಚ್ಚರಿಸಿದಾಗ ಶಕ್ತಿಯ ಹರಿವು
ಪ್ರಾರಂಭಿಸುತ್ತದೆ. ಪ್ರತಿಯೊಂದು ಚಕ್ರಕ್ಕೂ
ಅದಕ್ಕೆ ಸಂಬಂಧಿಸಿದ ತೊಂದರೆಗಳನ್ನು ದೃಢೀಕರಣದ ಮೂಲಕ ನಿವಾರಿಸಿಕೊಳ್ಳಬಹುದು. ಉದಾಹರಣೆಗೆ, ನೀವು ಸಮಸ್ಥಿತಿಯಲ್ಲಿಲ್ಲವೆಂದು ಎನಿಸಿದಾಗ ನೀವು “ನಾನು ಸಮಸ್ಥಿತಿಯಲ್ಲಿ ಸುರಕ್ಷಿತವಾಗಿದ್ದೇನೆ” ಎಂಬ ದೃಢೀಕರಣವನ್ನು ಪುನರುಚ್ಚರಿಸುವುದು.
ಚಕ್ರ ಚಿಕಿತ್ಸೆ ಮಂತ್ರ
ಮೂಲಾಧಾರ ಕೆಂಪು ಬಣ್ಣ ಲಂ
ಸ್ವಾಧಿಷ್ಟಾನ ಕಿತ್ತಳೆ ಬಣ್ಣ ವಂ
ಮಣಿಪೂರ ಹಳದಿ ಬಣ್ಣ ರಂ (ಸೂರ್ಯ ಬೆಳಕಿಗೆ ಶರೀರವನ್ನು ತೆರೆದುಕೊಳ್ಳುವುದು)
ಅನಾಹತ ಹಸಿರು ಬಣ್ಣ. ಯಂ
(ಹೃದಯವನ್ನು ತೆರೆಯುವ ಧ್ಯಾನ ಹಾಗೂ ಷರತ್ತುರಹಿತ ಪ್ರೀತಿಯನ್ನು ಬರಮಾಡಿ ಕೊಳ್ಳುವುದು)
ವಿಶುದ್ಧ ನೀಲಿ ಬಣ್ಣ ಹಂ
(ಮಂತ್ರ ಪಠಣ, ಹಾಡುಗಾರಿಕೆ, ಇತರೆ ಗಾಯನಗಳು)
ಅಜ್ಞ ಇಂಡಿಗೋ ಬಣ್ಣ ಓಂ
(ಅರ್ಥಗರ್ಭಿತ ಶಕ್ತಿಯನ್ನು ಉದ್ದೀಪನಗೊಳಿಸಲು ಪ್ರಾಣಾಯಾಮ)
ಸಹಸ್ರಾರ ನೇರಳೆ ಬಣ್ಣ ಅಂ
(ಸತತವಾದ ಧ್ಯಾನ ಹಾಗೂ ನಮ್ಮಲ್ಲಿನ ಆಧ್ಯಾತ್ಮಿಕ ಸಾರದೊಂದಿಗಿನ ಸಂಬಂಧ)
ಉಳಿದ ಚಕ್ರಗಳ ಸಮತೋಲನತೆಯಿಂದಲೂ
ಈ ಚಕ್ರದಲ್ಲಿ ಶಕ್ತಿಯು ಹರಿಯಲು ಸಾಧ್ಯವಾಗುವುದು.
ಚಕ್ರಗಳನ್ನು ಗುರಿಯಾಗಿಟ್ಟುಕೊಂಡು ಆಸನಗಳ ಅಭ್ಯಾಸ :
ಬಹಳಷ್ಟು ಆಸನಗಳು ಚಕ್ರವನ್ನು
ಉದ್ದೀಪನಗೊಳಿಸಲು ಸಹಕಾರಿಯಾಗುವುದು. ಚಕ್ರಗಳ ಸ್ಥಾನ ಹಾಗೂ ಶರೀರದ ಭಾಗಗಳನ್ನು ಹೊಂದಿಸಿಕೊಂಡು ಯಾವ ಆಸನವನ್ನು ಅಭ್ಯಾಸಮಾಡಿದರೆ
ಯಾವ ಚಕ್ರವು ಉದ್ದೀಪನಗೊಳ್ಳುವುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ಚಕ್ರ ಆಸನಗಳು
ಮೂಲಾಧಾರ ಮಲಾಸನ, ಪದ್ಮಾಸನ, ತಾಡಾಸನ
ಸ್ವಾಧಿಷ್ಟಾನ ಭುಜಂಗಾಸನ, ಧನುರಾಸನ
ಮಣಿಪೂರ ಪಶ್ಚಿಮೋತ್ಥಾನಾಸನ, ಅರ್ಧ ಮತ್ಸ್ಯೇಂದ್ರಾಸನ
ಅನಾಹತ ಮತ್ಸ್ಯಾಸನ, ಚಕ್ರಾಸನ, ಉಸ್ಟ್ರಾಸನ
ವಿಶುದ್ಧ ಸರ್ವಾಂಗಾಸನ ಅಥವಾ
ಹಲಾಸನ, ಜಲಂಧರ ಬಂಧವನ್ನುಂಟು
ಮಾಡುವ
ಆಸನಗಳು.
ಅಜ್ಞ ಮತ್ತು ಸಹಸ್ರಾರ ಶೀರ್ಷಾಸನ
ನಮ್ಮಲ್ಲಿನ ಭಾವನೆಗಳ
ಹಾಗೂ ದೈಹಿಕ ಶರೀರದ ಬಗ್ಗೆ ಅರಿವನ್ನುಂಟು ಮಾಡಿಕೊಂಡು ನಮ್ಮ ಶಕ್ತಿಯುತ ಶರೀರವನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಬಹುದು. ಸಮತೋಲನ ಪ್ರಕ್ರಿಯೆಯು ಪ್ರತಿನಿತ್ಯದ ಹಾಗೂ ಪ್ರತಿ ಕ್ಷಣದ ಪ್ರಕ್ರಿಯೆ. ನಿಮ್ಮಲ್ಲಿನ ಚಕ್ರಗಳನ್ನು ಸರಿಯಾದ ಸಮತೋಲನ ಸ್ಥಿತಿಯಲ್ಲಿಟ್ಟುಕೊಂಡು
ಹಾಗೂ ಆಯಾಯ ಚಕ್ರವು ನಿರ್ಬಂಧಿಸಲ್ಪಟ್ಟಾಗ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಆರೋಗ್ಯಕ್ಕೆ
ಒಳ್ಳೆಯದು. ಇದನ್ನು ಅನೇಕ ಸಾಧನಗಳಾದ - ಧ್ಯಾನ, ಆಸನ, ಬಣ್ಣ, ದೃಢೀಕರಣ ಹಾಗೂ ಮಂತ್ರೋಚ್ಚಾರಗಳನ್ನು ಉಪಯೋಗಿಸಿಕೊಂಡು ಸಹಜ
ಸ್ಥಿತಿಯಲ್ಲಿ ಜೀವಿಸಬಹುದು. ಪ್ರತಿಯೊಬ್ಬರೂ ತಮ್ಮದೇ ಆದ ವೈಶಿಷ್ಟ್ಯತೆಯುಳ್ಳವರು. ಹಾಗಾಗಿ ಪ್ರತಿಯೊಬ್ಬರೂ ತಮ್ಮಲ್ಲಿನ ಚಕ್ರಗಳಿಗೆ ಅನುಕೂಲವಾಗುವ
ಬೇರೆ ಬೇರೆ ಪದ್ಧತಿಗಳನ್ನು ಅನುಸರಿಸಬಹುದು. ನಮ್ಮಲ್ಲಿನ ಶಕ್ತಿಯನ್ನು ಚಕ್ರಗಳು ಆಳುವುದು ಎಂಬುದರ ಬಗ್ಗೆ ಅರ್ಥಮಾಡಿಕೊಂಡು ಹಾಗೂ ಅದರ
ಬಗ್ಗೆ ಜಾಗೃತಿಯನ್ನು ಉಂಟುಮಾಡಿಕೊಂಡು ನಾವು ಸೂಕ್ತ ಸಾಧನಗಳನ್ನು ಆರಿಸಿಕೊಂಡು ಅಭ್ಯಾಸ ಮಾಡಬಹುದು. ಉದಾಹರಣೆಗೆ - ನಾವು ವಾಹನವನ್ನು ನಡೆಸುತ್ತಿರುವಾಗ ದೃಢೀಕರಣವನ್ನು ಅಥವಾ ಮಂತ್ರೋಚ್ಚಾರಣೆಯಿಂದ ಸಮತೋಲನವನ್ನು
ಕಾಯ್ದುಕೊಳ್ಳಬಹುದು.
No comments:
Post a Comment