ದುಷ್ಟತನ - ಒಂದು ವಿಶ್ಲೇಷಣೆ
ಜಗತ್ತಿನಲ್ಲಿ ಪ್ರತಿಯೊಂದು
ವಸ್ತುವೂ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ಸತ್ಯ ನಂಬಿಕೆಯನ್ನು ಕೇಳುವುದಿಲ್ಲ. ಯಾರು ನಂಬಲಿ ಬಿಡಲಿ ಅದರ ಅಸ್ತಿತ್ವ ಅದಕ್ಕೆ ಇದ್ದೇ ಇರುತ್ತದೆ. ಪ್ರತಿಯೊಬ್ಬರಲ್ಲೂ ಒಳ್ಳೆಯತನ ಹಾಗೂ ದುಷ್ಟತನ ಇದ್ದೇ ಇರುತ್ತದೆ. ಈ ಎರಡರ ನಡುವಿನ ಸಂಘರ್ಷಕ್ಕೆ ವೇದಿಕೆಯಾಗುವುದು ಅಂತರಂಗ. ಅಂತರಂಗದಲ್ಲಿ ಯಾವಾಗಲೂ ಈ ಎರಡರ ನಡುವೆ ದ್ವoದ್ವಯುದ್ಧ ನಿರಂತರ ನಡೆಯುತ್ತಿರುತ್ತದೆ. ಅನೇಕ ಸಂದರ್ಭಗಳಲ್ಲಿ ಅಂತರಂಗದ ದುಷ್ಟತನಕ್ಕೆ ಹೊರಗಿನ ದುಷ್ಟತನವೂ
ಸೇರಿಕೊಂಡುಬಿಡುತ್ತದೆ. ಹಾಗಾಗಿಯೇ ದುಷ್ಟತನದೊಂದಿಗೆ ಮನುಷ್ಯನು ಹೊಂದಾಣಿಕೆ ಮಾಡಿಕೊಂಡುಬಿಡುತ್ತಾನೆ. ಒಮ್ಮೆ ಈ ಜಗತ್ತಿನ ಅತ್ಯಂತ ದುಷ್ಟ ಶಕ್ತಿಯ ದರ್ಶನವಾಗಿಬಿಟ್ಟರೆ
ಆಗ ಮನುಷ್ಯರಲ್ಲೇಕೆ ದುಷ್ಟತನವಿರುತ್ತದೆ ಎಂಬ ಪ್ರಶ್ನೆಗೆ ಉತ್ತರ ದೊರಕುತ್ತದೆ ಹಾಗು ದುಷ್ಟತನ ಮನುಷ್ಯನ
ಬೆನ್ನು ಹತ್ತಿ ಏಕೆ ಬರುತ್ತದೆ ಎಂಬ ಸತ್ಯ ತಿಳಿಯುತ್ತದೆ. ಮನುಷ್ಯನು ದುಷ್ಟತನ ಎಂಬ ಬಂಧನದಲ್ಲೂ ಸಿಲುಕಿರಬಹುದು. ಅಥವಾ ದುಷ್ಟತನದ ಒಂದು ಸಣ್ಣ ಅಂಶವೂ ಒಳ್ಳೆಯವರಲ್ಲಿ ಇರಬಹುದು. ದುಷ್ಟತನ ಎಂಬುವುದು ಮನುಷ್ಯನನ್ನೂ ಮೀರಿದ ಶಕ್ತಿಯಾಗಿರಬಹುದು. ಮೂಲತಃ ಮನುಷ್ಯನು ದುಷ್ಟನಾಗಿರುವುದಿಲ್ಲ. ಅದು ಕೇವಲ ಮನುಷ್ಯರನ್ನು ಮಾತ್ರ ಆಕರ್ಷಿಸುತ್ತದೆ. ಅದು ವೈರಿಗಳಲ್ಲಿ ಪರಸ್ಪರ ಗೊಂದಲವನ್ನುಂಟುಮಾಡುತ್ತದೆ. ಅದು ಕೇವಲ ಕೆಲವೇ ಜನಗಳಲ್ಲಿ ಇರುತ್ತದೆ ಎಂದು ಹೇಳಲಾಗದು.
ದುಷ್ಟತನ ಎಂಬುದು ಒಳ್ಳೆಯತನದಷ್ಟೇ
ಶಕ್ತಿಶಾಲಿಯಾಗಿರುತ್ತದೆ. ಅದು ತನ್ನ ಅಟ್ಟಹಾಸವನ್ನು ಮೆರೆಯುವುದಕ್ಕೆ ಮನುಷ್ಯನನ್ನು ದಾಳವಾಗಿ ಬಳಸಿಕೊಳ್ಳುತ್ತದೆ. ವ್ಯಕ್ತಿಯೊಬ್ಬ ಒಳ್ಳೆಯವನಾಗಿದ್ದರೂ ಆತ ದುಷ್ಟತನದ ವಿಷವರ್ತುಲಕ್ಕೆ
ಸಿಲುಕುವ ಸಾಧ್ಯತೆ ಇರುತ್ತದೆ. ಜನ ಒಂದು ಉದ್ದೇಶ ಸಾಧನೆಗೆ ದುಷ್ಟತನವನ್ನು ಅಪ್ಪಿಕೊಳ್ಳುತ್ತಾರೆ. ಅಂದರೆ ದುಷ್ಟತನಕ್ಕೂ ಒಂದು ಮಹೋನ್ನತ ಉದ್ದೇಶ ಇರುತ್ತದೆ.
ಈ ಜಗತ್ತಿನಲ್ಲಿ ಯಾವ
ಕೆಲಸ ಕಾರ್ಯಗಳೂ ಕಾರಣವಿಲ್ಲದೇ ನಡೆಯುವುದಿಲ್ಲ. ಹಾಗೆ ನಡೆಯುತ್ತಿದೆ ಎಂದರೆ ಅದರ ಬಗ್ಗೆ ನಮಗೆ ಸರಿಯಾದ ಅರಿವು ಹಾಗೂ ಉದ್ದೇಶ ಇಲ್ಲ ಎಂದೇ
ಅರ್ಥ. ಪ್ರತಿಯೊಂದು ವಿಚಾರದ ಹಿಂದೆ ಒಂದು ಘನ ಉದ್ದೇಶ ಇದ್ದೇ ಇರುತ್ತದೆ.
ದುಷ್ಟತನವನ್ನು ಸಂಪೂರ್ಣವಾಗಿ
ನಾಶಮಾಡುವುದು ಅಸಾಧ್ಯ. ಹಾಗೆ ಮಾಡಿದರೆ ಅದು ಮತ್ತೆ ಮತ್ತೆ ಎದ್ದು ಬರುತ್ತಲೇ ಇರುತ್ತದೆ ಹಾಗೂ ಬೇರೆ ಬೇರೆ ರೂಪದಲ್ಲಿ
ಅದು ಹೊರಹೊಮ್ಮುತ್ತದೆ. ಏಕೆಂದರೆ ದುಷ್ಟತನಕ್ಕೂ ಒಂದು ಉದ್ದೇಶ ಇರುತ್ತದೆ. ಒಳ್ಳೆಯತನ ಹಾಗೂ ದುಷ್ಟತನವನ್ನು ನಿಯಂತ್ರಿಸುತ್ತಾ ಸರಿದೂಗಿಸಬಲ್ಲ
ಏಕೈಕ ಶಕ್ತಿಯೆoದರೆ ಮಹಾದೇವ ಮಾತ್ರ.
ದುಷ್ಟ ಶಕ್ತಿಯ ಸಂಹಾರ
ಮಾಡಲು ಹೊರಟಿರುವವನಿಗೆ ಮೊದಲು ಆ ದುಷ್ಟಶಕ್ತಿ ಯಾವುದು? ಎಲ್ಲಿದೆ? ಯಾವರೂಪದಲ್ಲಿದೆ ಎಂಬುದು ಖಚಿತವಾಗಿ ತಿಳಿದಿರಬೇಕು. ಎಲ್ಲೋ ಯಾರಲ್ಲೋ ದುಷ್ಟ ಶಕ್ತಿ ಅಡಗಿದೆ ಎಂದ ಮಾತ್ರಕ್ಕೆ ಅವನನ್ನು
ಸಂಪೂರ್ಣವಾಗಿ ನಾಶಮಾಡಿಬಿಡುವುದು ಸರಿಯಲ್ಲ. ದುಷ್ಟತನದ ಹಿಂದಿರುವ ಶಕ್ತಿಯನ್ನು ಒಳಗಣ್ಣಿನಿಂದ ನೋಡಬೇಕು. ನಾವು ಯಾವುದನ್ನು ದುಷ್ಟಶಕ್ತಿ ಎಂದು ಪರಿಗಣಿಸಿರುತ್ತೇವೆಯೋ
ಅದೇ ಮತ್ತೊಂದು ಸಮಯದಲ್ಲಿ ಒಳ್ಳೆಯ ಉದ್ದೇಶವನ್ನು ಈಡೇರಿಸಬಹುದು. ದುಷ್ಟತನ ಹಾಗೂ ಒಳ್ಳೆಯತನ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಒಂದಾನೊಂದು ಕಾಲದಲ್ಲಿ
ದಾನವರೂ ದುಷ್ಟರಾಗಿರಲಿಲ್ಲ ಹಾಗಾಗಿ ಮಹಾದೇವನು ಸಂಪೂರ್ಣವಾಗಿ ದಾನವರನ್ನು ಧ್ವಂಸ ಮಾಡಲಿಲ್ಲ. ದುಷ್ಟತನ ಮನುಷ್ಯನಲ್ಲಿದೆ ಎಂದ ಮಾತ್ರಕ್ಕೆ ಅವನು ಕೆಟ್ಟವನಾಗಿರಬೇಕೆಂದೇನಿಲ್ಲ.
No comments:
Post a Comment