ನಮ್ಮ ಮನಸ್ಸು ಬಹುತೇಕ ಆಲೋಚನೆಗಳ ಗೂಡೇ?
ಇಬ್ಬರು ಸ್ನೇಹಿತರೋ ಅಥವಾ ಸoಬಂಧಿಗಳೋ ಒಂದೆಡೆ ಭೇಟಿಯಾದರೆ ಮೊದಲಿಗೆ ಮಾತನಾಡುವುದೇ ತಮ್ಮ
ಹಿಂದಿನ ಘಟನೆಗಳ ಬಗ್ಗೆ ಅಥವಾ ತಮ್ಮ ಮುಂದಿನ ಕನಸುಗಳ ಬಗ್ಗೆ. ಒಬ್ಬನು ತಾನು ಹೇಗೆ ಸಂದರ್ಭವನ್ನು ಚಾಕಚಕ್ಯತೆಯಿಂದ ನಿಭಾಯಿಸಿ
ತನ್ನ ಅನುಕೊಲಕ್ಕೆ ಸಂದರ್ಭವನ್ನು ತಿರುಗಿಸಿಕೊಂಡೆ ಇತ್ಯಾದಿ. ಇದಕ್ಕೆ ಪೂರಕವಾಗಿ ಮತ್ತೊಬ್ಬನು ಕೂಡ ತಾನು ಮುಂದಿನ ದಿನಗಳಲ್ಲಿ
ಹೇಗೆ ಹಣವನ್ನು ಹೆಚ್ಚುಮಾಡಿಕೊಳ್ಳುವುದೋ ಅಥವಾ ಹೇಗೆ ಇನ್ನೊಬ್ಬರ ದೌರ್ಬಲ್ಯವನ್ನು ತನ್ನ ಲಾಭಕ್ಕೆ
ಬಳಸಿಕೊಳ್ಳುವುದು ಎಂಬುದರಬಗ್ಗೆ ವಿವರಿಸುತ್ತಾನೆ. ಹೀಗೆ ಅನೇಕ ಸಂದರ್ಭಗಳಲ್ಲಿ ನಾವುಗಳು ನಮ್ಮ ಗತವೈಭವಗಳನ್ನು ಅಥವಾ ಮುಂದಿನ ಕನಸುಗಳ ಬಗ್ಗೆಯೂ
ಯಾವಾಗಲೂ ಯೋಚಿಸುತ್ತಿರುತ್ತೇವೆ.
ಆಲೋಚನೆಗಳು / ಚಿoತನೆಗಳು / ಕಲ್ಪನೆಗಳು ನಮ್ಮ ಪ್ರಸ್ತುತ ಕ್ರಿಯೆಗಳನ್ನು ಅನುಭವಿಸಲು ಅನೇಕ
ಬಾರಿ ಅಡ್ಡಿಪಡಿಸುತ್ತವೆ. ಮನಸ್ಸಿನಲ್ಲಿ ಯೋಚನೆಗಳು
ಉತ್ಪತ್ತಿಯಾಗುತ್ತಿದ್ದಂತೆ ಪ್ರಸ್ತುತ ಕ್ರಿಯೆಯು ತನ್ನಷ್ಟಕ್ಕೆ ತಾನೇ ಹಿಂದೆಸರಿಯುತ್ತದೆ. ಸಾಮಾನ್ಯವಾಗಿ ಯೋಚನೆಗಳು ನೆನೆಪುಗಳ ಅಭಿವ್ಯಕ್ತಿ ಹಾಗೂ ನೆನಪುಗಳೆಂದರೆ
ನಡೆದುಹೋದ ಘಟನೆಗಳಿಗೆ ಸಂಬಂಧಿಸಿರುವುದರಿಂದ ನಮ್ಮನ್ನು ಪ್ರಸ್ತುತ ಕ್ರಿಯೆಗಳಲ್ಲಿ ಗಮನಹರಿಸುವುದರ
ಬದಲಾಗಿ ಭೂತಕಾಲಕ್ಕೆ ಎಳೆದುಕೊಂಡು ಹೋಗುತ್ತದೆ. ನಮ್ಮ ಜೀವನವು ಪ್ರಸ್ತುತ ಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ, ಆದರೆ ನಮ್ಮ ಜೀವನವು ಭೂತಕಾಲಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಿತ್ತಿರುತ್ತದೆ. ಇದು ನಮ್ಮ ಜೀವನದಲ್ಲಿನ ಅತಿ ದೊಡ್ಡ ತಪ್ಪು. ಯೋಚನೆಗಳಿಗೆ ನಮ್ಮ ಜೀವನದಲ್ಲಿ ಸ್ಥಾನವಿರುವುದಾದರೂ ಅವುಗಳನ್ನು
ಅತಿಯಾಗಿ ಉಪಯೋಗಿಸಿವುದಲ್ಲದೇ ತಪ್ಪಾಗಿ ಉಪಯೋಗಿಸುವುದರಿಂದ ಆಂತರಿಕ ಅವ್ಯವಸ್ಥೆಗೆ ಕಾರಣವಾಗುತ್ತದೆ.
ನಮ್ಮ ಜೀವನದಲ್ಲಿ ನಾವು ಯಾವಾಗಲೂ ನಮ್ಮ ಕನಸಿನ ಯೋಜನೆಗಳ ಬಗ್ಗೆಯೂ
ಅಥವಾ ಗತಿಸಿದ ಮಾರ್ಗಗಳಲ್ಲಿ ಪಯಣಿಸುತ್ತಿರುತ್ತೇವೆ. ಗತಿಸಿದ ಆಲೋಚನೆಗಳು, ನೆಮ್ಮದಿದೊರಕುವುದೆಂಬ ಆಶಯದಿಂದ ಭವಿಷ್ಯತ್ತಿನ ಹಾಸ್ಯಾಸ್ಪದ
ಮುನ್ನಂದಾಜುಗಳನ್ನೇ ನೈಜವಾದ ಆಲೋಚನೆಗಳೆಂದು ಭಾವಿಸುತ್ತೇವೆ. ಹೀಗಾಗಿ ನಾವು ಜೀವನದ ಪ್ರಸ್ತುತ ಕ್ಷಣಗಳನ್ನು ಕಳೆದುಕೊಳ್ಳುತ್ತೇವೆ.
ನಮ್ಮ ಜೀವನದ ಇರವು ಅಥವಾ ಬೇರುಗಳು ಇರುವುದೇ ಪ್ರಸ್ತುತ ಚಿoತನೆಗಳಲ್ಲಿ, ಆದರೆ ನಾವು ಗತಿಸಿದ ಘಟನೆಗಳೊಡನೆ ಅಥವಾ ಭವಿಷ್ಯತ್ತಿನ ಭ್ರಮಾಲೋಕದೊಡನೆ ವಿಹರಿಸುತ್ತಿರುತ್ತೇವೆ. ಪ್ರಸ್ತುತದ ಬಗ್ಗೆ ಅರಿವು ಮತ್ತು ಆನಂದ ಎರಡೂ ಒಂದೇ. ಇದರ ಬಗ್ಗೆ ಅರಿವಿಲ್ಲದಿರುವುದು ದುಃಸ್ಥಿತಿ ಹಾಗಾಗಿ ಇವೆರಡೂ
ಜೊತೆ ಜೊತೆಯಾಗಿಯೇ ಇರುತ್ತವೆ. ಹಾಗಾಗಿ ನಾವು ಪ್ರಸ್ತುತದ ಬಗ್ಗೆ ಅರಿವುಳ್ಳವರಾಗಬೇಕು. ಈ ವಿಧವಾದ ಅರಿವು ಯೋಚನೆಗಳಿಂದ ಆಗುವುದಿಲ್ಲ ಬದಲಾಗಿ ಮೌನದಿಂದಾಗುತ್ತದೆ. ಮೌನವೆಂದರೆ ಯೋಚನಾರಹಿತ ಅರಿವಿನ ಸ್ಥಿತಿ. ಆದ್ದರಿಂದ ನಮ್ಮ ಆಂತರಿಕ ಶಕ್ತಿಯನ್ನು ಯೋಚನೆಗಳಿಂದ ಪ್ರಸ್ತುತಕ್ಕೆ
ಅರಿವಿಗೆ ಪರಿವರ್ತಿಸಿಕೊಳ್ಳಬೇಕಿದೆ.
ನಾವು ನಮ್ಮ ಆಲೋಚನೆಗಳಿಗೆ ನಮ್ಮನ್ನು ಗುರುತಿಸಿಕೊಂಡಾಗ ಏನಾಗುತ್ತದೆ?
ನಾವು ನಮ್ಮ ಸುತ್ತಲೂ ಒಂದು ಬಂದಿಖಾನೆಯನ್ನು ಕಟ್ಟಿಕೊಂಡಿದ್ದೇವೆ, ಅದರಿಂದ ಹೊರಬರಲು ಪ್ರಯತ್ನಿಸಬೇಕು. ಇದಕ್ಕೆ ಯಾರೂ ಸಹಾಯಮಾಡುವುದಿಲ್ಲ. ನಾವೇ ಆಂತರಿಕ ಬಂದಿಖಾನೆಯನ್ನು ಕಟ್ಟಿಕೊಂಡಿರುವುದರಿಂದ ಇದರಿಂದ ಹೊರಬರಲು ಮಾರ್ಗವನ್ನು ನಾವೇ
ಕಂಡುಕೊಳ್ಳಬೇಕು. ನಾವು ನಮ್ಮ ಆಲೋಚನೆಗಳಿಗೆ
ಗುರುತಿಸಿಕೊಂಡಕೂಡಲೇ ನಾವು ನಮ್ಮ ಗತಕಾಲಕ್ಕೆ ಸುಲಭವಾಗಿ ಹೋಗಿಬಿಡುತ್ತೇವೆ. ಬಹುತೇಕವಾಗಿ ನಾವು ನಮ್ಮ ಗತಕಾಲದಲ್ಲೇ ಜೀವಿಸುತ್ತಿರುತ್ತೇವೆ. ನಮ್ಮಲ್ಲಿ ಬಹುಜನರು ಈ ಜಗತ್ತಿನಲ್ಲಿ ಜೀವಿಸುತ್ತಿರುವುದಿಲ್ಲ, ಬದಲಾಗಿ ಮನಸ್ಸಿನಲ್ಲಿ ಜೀವಿಸುತ್ತಿರುತ್ತಾರೆ. ನಾವು ಆಲೋಚನೆಗಳಿಗೆ ಗುರುತಿಸಿಕೊಂಡಕೊಡಲೇ ನಮ್ಮ ನಂಬಿಕೆಯೊಡನೆ
ಪ್ರಯಾಣಮಾಡತೊಡಗುತ್ತೇವೆ. ನಂಬಿಕೆಗಳ ಮೂಲವೇ ಯೋಚನೆಗಳು, ಭಾವನೆಗಳು, ತತ್ವ ಸಿದ್ದಾಂತ ಅಥವಾ
ನಿರ್ಣಯಗಳು. ಇವೆಲ್ಲವುಗಳೂ ಆಸೆಯೆಂಬ
ಕುದುರೆಯಮೇಲೆ ಸವಾರಿ ಮಾಡುತ್ತಿರುತ್ತವೆ. ಆಸೆಗಳು ಏನು ಮಾಡುತ್ತವೆ? ಅವುಗಳು ನಮಗೆ ನಮ್ಮ ಭವಿಷ್ಯತ್ತು ನಮ್ಮನ್ನು ಬಚಾವು ಮಾಡುತ್ತವೆ ಮತ್ತು ನಮ್ಮ ಆಸೆಯ ಗುರಿಯನ್ನು
ತಲುಪಿದಾಗ ನಾವು ಸಂತೋಷಪಡುತ್ತೇವೆ ಎಂದು ಹುರಿದುಂಬಿಸುತ್ತವೆ. ಈ ವಿಧವಾದ ಆಸೆಗಳು ನಮ್ಮನ್ನು ಮೂರ್ಖರನ್ನಾಗಿಸುತ್ತವೆ. ಒಮ್ಮೆ ಈ ವಿಧವಾದ ಆಸೆಗಳು ಉತ್ಪತ್ತಿಯಾದ ಕೂಡಲೇ ಯೋಚನೆಗಳಿಗೆ
ಶಕ್ತಿ ಬಂದು ಅವುಗಳು ಸೈನಿಕರಂತೆ ಮುನ್ನಡೆಯುತ್ತವೆ. ಈ ಪ್ರಕ್ರಿಯೆಯಲ್ಲಿ ಸದ್ದಿಲ್ಲದೇ ಬೇರೊಂದು ನಮ್ಮ ಮನಸ್ಸಿನಲ್ಲಿ
ಆಗುತ್ತಿರುತ್ತದೆ. ಪ್ರಸ್ತುದದಲ್ಲಿ ನಾವು
ಈಗ ಅಸಂತುಷ್ಟರಾಗಿದ್ದರೂ ಭವಿಷ್ಯದಲ್ಲಿ ಸಂತೋಷವನ್ನು ಪಡೆಯುತ್ತೇವೆ ಎಂದು ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳುತ್ತಿರುತ್ತೇವೆ. ಈ ವಿಧವಾದ ಸಮ್ಮೋಹನವು ನಮ್ಮಲ್ಲಿ ಆಗುತ್ತಿರುತ್ತದೆ.
ಹಾಗಾಗಿ ಅಸಂತುಷ್ಟ ವ್ಯಕ್ತಿಯು ಸಂತೋಷವನ್ನು ನಿರೀಕ್ಷಿಸುತ್ತಿರುತ್ತಾನೆ. ಆಸೆಗಳು ಪೂರೈಸಿದಾಗ ಅದರ ಫಲಗಳನ್ನು ಅನುಭವಿಸುವವರು ಅಸಂತುಷ್ಟರಾದ
ನಾವೇ. ಹಾಗಾಗಿ ಅಸಂತುಷ್ಟ ವ್ಯಕ್ತಿಯು ಅದೇ ಸ್ಥಿತಿಯಲ್ಲಿ ಮುಂದುವರೆಯುತ್ತಾನೆ ಹಾಗೂ ತತ್ ಕ್ಷಣದಲ್ಲೇ
ಮತ್ತೊಂದು ಆಸೆಯು ನಮ್ಮ ಮನಸ್ಸಿನಲ್ಲಿ ಉದಯಿಸಿ ಈ ಹೊಸ ಆಸೆಯು ಪೂರೈಸಿದನಂತರ ನಮಗೆ ಅನಂತ ಸಂತೋಷವು ಉಂಟಾಗುತ್ತದೆಂದು
ನಮ್ಮನ್ನು ಮೂರ್ಖರನ್ನಾಗಿಸುತ್ತದೆ.
ಒಟ್ಟಾರೆ ಭೂತ ಹಾಗೂ ಭವಿಷ್ಯತ್ತನ್ನು ಹೊರತುಪಡಿಸಿ ಕೇವಲ ಪ್ರಸ್ತುತದ
ವಿಷಯಗಳ ಬಗ್ಗೆ ಮಾತ್ರ ಮನಸ್ಸನ್ನು ಕೇಂದ್ರೀಕರಿಸುವುದು ಸಾಮಾನ್ಯ ಮನುಷ್ಯನಿಗೆ ಅಸಾಧ್ಯದ ಮಾತೇ. ಇದು ಸಾಧ್ಯವಾಗುವುದು ಮಹಾ ಮಹಿಮಾನ್ವಿತರಿಗೆ ಮಾತ್ರ ಸಾಧ್ಯ. ಗತ ಕಾಲದಲ್ಲಿ ಘಟಿಸಿದ ಘಟನೆಗಳ ಬಗ್ಗೆ ಚಿoತಿಸದೇ ಕೇವಲ ಭವಿಷ್ಯದ ಬಗ್ಗೆ ಹಾಗು ಪ್ರಸ್ತುತದ ಬಗ್ಗೆ ಮನಸ್ಸಿನಲ್ಲಿ ಚಿoತಿಸಿದರೂ ಸ್ವಲಮಟ್ಟಿಗೆ ಇದು ನಮ್ಮ ಜೀವನದ ಆದರ್ಶ ಗುರಿಯೆಡೆಗೆ
ನಡೆಯಲು ಸಹಾಯವಾಗಬಹುದು. ಒಂದುವೇಳೆ ಇದೂ ಸಾಧ್ಯವಾಗದಿದ್ದಲ್ಲಿ ಗತಿಸಿದ ಘಟನೆಗಳ ಹಾಗೂ ಭವಿಷ್ಯತ್ತಿನ ಕನಸುಗಳ ಕಾಲಮಿತಿಯನ್ನು ನಿರ್ಧರಿಸಿ ಅದರಂತೆ ನಡೆದುಕೊಂಡರಾದರೂ ನಾವು ಕೆಲಮಟ್ಟಿಗೆ
ಸಂತೋಷವನ್ನು ಅನುಭವಿಸಬಹುದೇನೋ?
ಕನ್ನಡಕ್ಕೆ ಭಾಷಾoತರ - ಗುರುಪ್ರಸಾದ್ ಹಾಲ್ಕುರಿಕೆ
No comments:
Post a Comment