ಮಹಾ ಮೃತ್ಯುಂಜಯ ಮಂತ್ರ - ವೈಶಿಷ್ಟ್ಯತೆ ಹಾಗೂ
ಪ್ರಯೋಜನ
ಮಂತ್ರದ ಉಗಮ:
ಭಾರತೀಯ ಪುರಾಣ ಹಾಗೂ ಆಧ್ಯಾತ್ಮಿಕ ಪ್ರಪಂಚದಲ್ಲಿ ಅತ್ಯಂತ ಪುರಾತನ
ಹಾಗೂ ಅತಿ ಮುಖ್ಯವಾದ ಮಂತ್ರವೇ ಮಹಾ ಮೃತ್ಯುಂಜಯ ಮಂತ್ರ. ಈ ಮಂತ್ರವು ಶಿವನಿಗೆ ಸೇರಿದ್ದು. ಇದು ದೇವನಾಗರಿಯ (ಸಂಸ್ಕೃತ) ಮೂರು ಪದಗಳೊನ್ನೊಳಗೊಂಡಿದೆ. "ಮಹಾ" ಎಂದರೆ "ಬೃಹತ್ತ್",
"ಮೃತ್ಯುಂ" ಎಂದರೆ "ಮೃತ್ಯು" ಮತ್ತು "ಜಯ" ಎಂದರೆ "ಗೆಲುವು"
ಅಂದರೆ ಮೃತ್ಯುವನ್ನು ಜಯಿಸುವುದು ಅಥವಾ ಮೃತ್ಯುವನ್ನು ಗೆಲ್ಲುವುದು.
ಈ ಮಂತ್ರವನ್ನು "ರುದ್ರ ಮಂತ್ರ" ವೆಂದೂ ಅಥವಾ "ತ್ರಯಂಬಕ ಮಂತ್ರ" ಎಂದೂ ಗುರುತಿಸಲಾಗಿದೆ. ಈ ಮಂತ್ರದ ಸೃಷ್ಟಿಯ ಬಗೆಗೆ ಕೆಲವು ವಿವರಣೆಗಳುಂಟು.
ಮೊದಲನೆಯದು - ಈ ಮಂತ್ರವನ್ನು ಸೃಷ್ಟಿಸಿದವರು ಮಾರ್ಕಾಂಡೇಯ ಮುನಿಗಳು. ದಕ್ಷಪ್ರಜಾಪತಿಯ ಶಾಪದಿಂದಾಗಿ ಒಮ್ಮೆ ಚಂದ್ರನಿಗೆ ಸಂಕಟವೊದಗಿತು. ಆಗ ಮಾರ್ಕಾಂಡೇಯ ಮುನಿಗಳು ಈ ಮಂತ್ರವನ್ನು ದಕ್ಷನ ಮಗಳಾದ ಸತೀ ದೇವಿಗೆ ಉಪದೇಶಿಸಿದರು. ಸತೀ ದೇವಿಯು ಅದನ್ನು ಚಂದ್ರನಿಗೆ
ನೀಡಿದಳು.
ಎರಡನೆಯದು: ಮತ್ತೊಂದು ಆವೃತ್ತಿಯ ಪ್ರಕಾರ ಭಗವಾನ್ ಶಂಕರನು ಮಹಾಮುನಿ ಶುಕ್ರಾಚಾರ್ಯನಿಗೆ
ಈ ಬೀಜ ಮಂತ್ರವನ್ನು ನೀಡಿದನೆಂದು ಕಹೋಲ ಮುನಿಯು ಪ್ರಸ್ತುತ ಪಡಿಸಿರುವರು. ಶುಕ್ರಾಚಾರ್ಯರು ಈ ಮಂತ್ರವನ್ನು ಧಧೀಚಿ ಮುನಿಗಳಿಗೆ ಬೋಧಿಸಿದರು. ಧಧೀಚಿ ಮುನಿಗಳು ಈ ಮಂತ್ರವನ್ನು ರಾಜ ಕುಶ್ವನಿಗೆ ನೀಡಿ, ಕುಶ್ವ
ರಾಜನಿಂದ ಶಿವಪುರಾಣವನ್ನು ತಲುಪಿತು.
ಮಹಾ ಮೃತ್ಯುಂಜಯ ಮಂತ್ರದ ಮೂಲಾರ್ಥ:
ತ್ರಯಂಬಕಮ್ ಯಜಾಮಹೇ
ಸುಗಂಧಿಮ್ ಪುಷ್ಟಿವರ್ಧನಮ್
ಉರ್ವಾರುಕಮಿವ ಬಂಧನಾನ್
ಮೃತ್ಯೋರ್ಮುಕ್ಷಿಯ ಮಾಮೃತಾತ್
ಓಂ - ಪರಬ್ರಹ್ಮನ ಚಿನ್ಹೆ
ತ್ರಯಂಬಕಮ್ - ಮೂರು ಕಣ್ಣುಳ್ಳವನು
ಯಜಾಮಹೇ - ನಾವು ಪೂಜಿಸುವೆವು
ಸುಗಂಧಿಮ್ - ಸುಗಂಧ (ಆಧ್ಯಾತ್ಮಿಕ ಮೂಲ ತತ್ವ)
ಪುಷ್ಟಿವರ್ಧನಮ್ - ಆಧ್ಯಾತ್ಮಿಕ ಮೂಲ ತತ್ವದಂತೆ ಪೋಷಿಸುವವ.
ಪುಷ್ಟಿ ಎಂದರೆ ಉತ್ತಮ ಸ್ಥಿತಿಯಲ್ಲಿ /ಪೋಷಿಸುವ ಸ್ಥಿತಿಯಲ್ಲಿ.
ವರ್ಧನ ಎಂದರೆ ಹೆಚ್ಚುತ್ತಿರುವ, ಬೆಳೆಯುವ
ಉರ್ವಾರುಕಮಿವ - ಸೌತೆಕಾಯಿಯಂತೆ
ಬಂಧನಾನ್ - ಬಂಧನ ( ಸಂಸಾರ ಅಥವಾ ಪ್ರಾಪಂಚಿಕ ಜೀವನ)
ಮೃತ್ಯೋರ್ಮುಕ್ಷೀಯ - ಸಾವಿನ ಭಯದಿಂದ ಬಿಡುಗಡೆ ಮಾಡು (ವಿಮುಕ್ತಗೊಳಿಸು)
ಮಾಮೃತಾತ್ - ನಾವು ಅಮರತ್ವದಿಂದ ಎಂದಿಗೂ ಬೇರ್ಪಟ್ಟವರಲ್ಲ ಎಂಬ ಅರಿವನ್ನು ಅರ್ಥಮಾಡಿಕೊಳ್ಳಲು ಸಾವಿನ
ಭಯದಿಂದ ನಮ್ಮನ್ನು ಮುಕ್ತಿಗೊಳಿಸು.
Commentary:
We concentrate on our
third eye which lies behind two eyes and this gives us the power to feel you
and by this we feel happy, satisfied and peace in life. We know immortality is
not possible but some extension can be given to our death by your powers Oh !
Lord Shiva.
ನಾವು ನಮ್ಮ ಎರಡು ಕಣ್ಣುಗಳ ಹಿಂಭಾಗದಲ್ಲಿರುವ ಅಗೋಚರವಾದ ಮೂರನೇ
ಕಣ್ಣಿನ ಮೇಲೆ ನಮ್ಮ ಚಿತ್ತವನ್ನು ಕೇಂದ್ರೀಕರಿಸುತ್ತೇವೆ. ಇದು ನಮಗೆ ನಿನ್ನನ್ನು (ಶಿವನನ್ನು) ಅರಿಯಲು ಶಕ್ತಿಯನ್ನು ನೀಡುತ್ತದೆ ಹಾಗೂ ಹೀಗೆ ಮಾಡಿದಾಗ ನಮ್ಮ ಜೀವನದಲ್ಲಿ ಸಂತೋಷ,
ತೃಪ್ತಿ ಮತ್ತು ಶಾಂತಿಯ ಅನುಭವವಾಗುತ್ತದೆ. ಓ ಶಿವನೇ,
ನಮಗೆ ಅಮರತ್ವ ದೊರಕುವುದು ಅಸಾಧ್ಯವೆಂದು ತಿಳಿದಿದೆ, ಆದರೆ
ನಮ್ಮ ಸಾವನ್ನು ಸ್ವಲ್ಪ ಕಾಲ ಮುಂದೂಡುವ ಶಕ್ತಿಯನ್ನು ದಯಪಾಲಿಸು.
ಮಹಾ ಮೃತ್ಯುಂಜಯ ಮಂತ್ರದ ವೈಶಿಷ್ಟ್ಯತೆ :
ಮೃತ್ಯುಂಜಯ ಮಂತ್ರವನ್ನು ಏಕಾಗ್ರತೆಯಿಂದ ಹಾಗೂ ಶ್ರದ್ಧೆಯಿಂದ
ಪಠಿಸಿದರೆ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸ್ಥಿತಿಯು ಉತ್ತಮವಾಗುತ್ತದೆ.
ಈ ಮಂತ್ರವನ್ನು ಸತೀ ದೇವಿಯು ಹಾಗೂ ಅನೇಕ ಋಷಿ ಮುನಿಗಳು ದಕ್ಷ ಪ್ರಜಾಪತಿಯ ಶಾಪದಿಂದ
ಚಂದ್ರನು ಅನುಭವಿಸುತ್ತಿದ್ದ ಅಂತ್ಯಕಾಲದ ಯಾತನೆಯಿಂದ ಮುಕ್ತಿಗೊಳಿಸುವ ಸಲುವಾಗಿ ಪಠಿಸಿದ್ದರೆಂದು
ಪುರಾಣದಲ್ಲಿ ಉಲ್ಲೇಖವಿದೆ. ಈ ರೀತಿಯ ಮಂತ್ರ ಸ್ತುತಿಯಿಂದ ಚಂದ್ರನ
ಅವಸಾನವು ಮುಂದೂಡಲ್ಪಟ್ಟು ನಂತರ ಭಗವಾನ್ ಶಂಕರನು ಚಂದ್ರನನ್ನು ತನ್ನೆಡೆಗೆ ತೆಗೆದುಕೊಂಡು ಅವನನ್ನು
ತನ್ನ ಶಿರದಲ್ಲಿ ಧರಿಸಿ ಅವನಿಗೆ ಶಾಪವಿಮುಕ್ತಿಯನ್ನು ಕರುಣಿಸಿದನೆಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಶೈವಾನುಯಾಯಿಗಳು ವಿಭೂತಿಯನ್ನು ಶರೀರದ ಮೇಲೆ ಧರಿಸುವಾಗಲೂ, ಹವನ, ಹೋಮಗಳ ಸಂದರ್ಭಗಳಲ್ಲೂ ಪಠಿಸುತ್ತಾರೆ.
ಗಾಯತ್ರೀ ಮಂತ್ರವನ್ನು ಜಪಿಸುವುದರಿಂದ ಶರೀರ ಹಾಗೂ ಮನಸ್ಸಿನ ಶುದ್ಧೀಕರಣ ಮತ್ತು
ಆಧ್ಯಾತ್ಮಿಕ ಮಾರ್ಗದರ್ಶನವಾದರೆ, ಮಹಾ ಮೃತ್ಯುಂಜಯ ಮಂತ್ರವನ್ನು ಕ್ರಮ ಬದ್ಧವಾಗಿ
ಜಪಿಸಿದ್ದಲ್ಲಿ ಶಾರೀರಿಕ ಬಾಧೆಗಳಿಂದ ಮುಕ್ತಿ ಹೊಂದಿ ನವಚೈತನ್ಯ ಹಾಗೂ ಮಾನಸಿಕ ಮತ್ತು ಶಾರೀರಿಕ ಪೋಷಣೆ
ಲಭಿಸುತ್ತದೆ.
ಮಹಾ ಮೃತ್ಯುಂಜಯ ಮಂತ್ರ ಜಪಮಾಡುವ ಕ್ರಮಗಳು:
ಈ ಮಂತ್ರವನ್ನು ಪ್ರಾಮಾಣಿಕವಾಗಿ ಶ್ರದ್ಧೆ, ನಂಬಿಕೆ ಹಾಗೂ ಭಕ್ತಿಯಿಂದ ಜಪಿಸಬೇಕು. ಈ ಮಂತ್ರವನ್ನು
ಜಪಿಸಲು ಸೂಕ್ತ ಸಮಯವೆಂದರೆ ಬ್ರಾಹ್ಮೀ ಮುಹೂರ್ತ. ಹಾಗೆ ಮಾಡಲಾಗದಿದ್ದಲ್ಲಿ
ಬೆಳಗಾದ ಮೇಲೆ ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿದಮೇಲೆ ಕೂಡಾ ಜಪಿಸಬಹುದು. ವಿಭೂತಿ, ಕುಂಕುಮ ಅಥವಾ ಚಂದನ ಧಾರಣೆಯ ಸಮಯದಲ್ಲೂ ಜಪಿಸಬಹುದು.
ಒಂದು ಲೋಟದಲ್ಲಿ ಶುದ್ಧವಾದ ನೀರನ್ನು ತೆಗೆದುಕೊಂಡು ಶುಚಿರ್ಭುೂತರಾಗಿ ಪೂರ್ವ ಅಥವಾ
ಉತ್ತರ ದಿಕ್ಕಿಗೆ ಕುಳಿತು ಬಲಹಸ್ತದಿಂದ ಲೋಟವನ್ನು ಮುಚ್ಚಿಹಿಡಿದು 1008 ಬಾರಿ ಮಂತ್ರವನ್ನು ಜಪಿಸಿ ನಂತರ ಲೋಟದಲ್ಲಿನ ನೀರನ್ನು ಮನೆಯೊಳಗಿನ ಎಲ್ಲ ಭಾಗಗಳಲ್ಲೂ ಪ್ರೋಕ್ಷಿಸಿ
ಉಳಿದ ನೀರನ್ನು ಮನೆಯಲ್ಲಿರುವ ಸದಸ್ಯರಿಗೆ ನೀಡಬೇಕು. ಹೀಗೆ ಮಾಡುವುದರಿಂದ
ಶಿವ ಶಕ್ತಿಯನ್ನು ನೀರಿನಲ್ಲಿ ಆವಿರ್ಭವಿಸಬಹುದು.
ಮಂತ್ರಗಳನ್ನು ವಿಧಿವತ್ತಾಗಿ ಉಚ್ಚರಿಸಿದರೆ ಇಚ್ಛಾಶಕ್ತಿ ಹೆಚ್ಚಿಯೇ
ಹೆಚ್ಚುತ್ತದೆ. ಹೀಗಾಗುವಲ್ಲಿ ಯಾರದೇ ಇಚ್ಛೆ, ಕೃಪೆ ಇಲ್ಲವೇ ಅವಕೃಪೆಯ ಪ್ರಶ್ನೆಯೇ ಹುಟ್ಟಿಕೊಳ್ಳದು.
ಮಹಾ ಮೃತ್ಯುಂಜಯ ಮಂತ್ರವನ್ನು ಕ್ರಮ ಬದ್ಧವಾಗಿ ಪ್ರತಿನಿತ್ಯ
ಪಠಿಸಿದ್ದಲ್ಲಿ ಅದರ ಪ್ರಭಾವದಿಂದ ದೈವಿಕ ಕಂಪನವು ಉತ್ಪತ್ತಿಯಾಗಿ ಅವು ಮನೆಯೊಳಗಿರುವ ನಕಾರಾತ್ಮಕ
ಮತ್ತು ದುಷ್ಟ ಶಕ್ತಿಗಳನ್ನು ಹೋಗಲಾಡಿಸಿ ಶಕ್ತಿಯುತವಾದ ರಕ್ಷಣಾ ಪದರವನ್ನು ಸೃಷ್ಟಿಸುತ್ತದೆ. ಹಾಗೂ ಅಕಾಲಿಕ ಮರಣ, ಅಪಘಾತ ಇತ್ಯಾದಿ ಸಂದರ್ಭಗಳಿಂದ
ರಕ್ಷಣೆಯನ್ನೊದಗಿಸುತ್ತದೆ. ಮಹಾ ಮೃತ್ಯುಂಜಯ ಜಪವು ಅಕಾಲಿಕ ಮರಣವನ್ನು
ತಪ್ಪಿಸುತ್ತದೆಯೇ ಹೊರತು, ಮರಣವನ್ನೇ ತಪ್ಪಿಸುವುದಿಲ್ಲ, ಏಕೆಂದರೆ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಯೂ ಮರಣಿಸಲೇ ಬೇಕು.
ಓಂ ನಮ ಶಿವಾಯ
No comments:
Post a Comment