ಪ್ರತಿನಿತ್ಯ ಮುಂಜಾನೆ ಏಳಲು ಬಲವಾದ ಕಾರಣವೇನು?
ಈ
ದಿನ ಭಾನುವಾರ. ಬೆಳಗ್ಗೆ ಎದ್ದು ಮತ್ತೆ ಮಲಗುವ ತವಕ. ಆದರೆ, ನಾಳೆಯ ದಿನ ಬೇರೆಯೇ
ಆಗಿದೆ.
ಯಾರೂ “ಸೋಮವಾರವನ್ನು ಪ್ರೀತಿಸುತ್ತೇನೆ
ಎಂದು ಸಾಮಾನ್ಯವಾಗಿ ಯಾರೂ ಹೇಳುವುದಿಲ್ಲವೇಕೆ? ಮತ್ತೆ ಕೆಲವರಿಗೆ ದಿನ ಯಾವುದಾದರೂ ಅತ್ಯಂತ
ಉತ್ಸಾಹದಿಂದ ಬೆಳಗನ್ನು ಸ್ವಾಗತಿಸುತ್ತಾರೆ,
ಏಕೆಂದರೆ ಅವರಿಗೆ ಅವರದೇ ಆದ ಕಾರಣಗಳಿರುತ್ತವೆ. ಸುಲಭವಾಗಿ ಹೇಳುವುದಾದರೆ
ಅದು ಅವರು ಬೆಳಗನ್ನು ಸ್ವಾಗತಿಸಲು ಅತಿ ಮಹತ್ವವಾದ ಕಾರಣವಾಗಿರುತ್ತದೆ.
ಪ್ರತಿನಿತ್ಯವೂ
ಬೆಳಗ್ಗೆ ಏಳಲು ಕಾರಣವೇಕೆ ಬೇಕು ಎಂಬ ಪ್ರಶ್ನೆ ಉದ್ಭವಿಸಬಹುದು. ಕಾರಣವಿಲ್ಲದೇ ಇದ್ದಲ್ಲಿ
ಆ ದಿನವು ನೀರಸ ಹಾಗೂ ಉತ್ಸಾಹರಹಿತವಾಗಿರುವುದು. ಕಾರಣವಿದ್ದಲ್ಲಿ ಅದನ್ನು ಅನುಭವಿಸಲು ಅಥವಾ
ಆ ದಿನದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಲು ದಿನವಿಡೀ ಉತ್ಸಾಹದಿಂದಿರಬಹುದು. ನಾವು ಜೀವನದಲ್ಲಿ ತಮ್ಮ ವೃತ್ತಿಯಲ್ಲಿ ಅಥವಾ ಜೀವನದಲ್ಲಿ ಯಶಸ್ಸನ್ನು ಗಳಿಸಿದವರನ್ನು
ಸೂಕ್ಷ್ಮವಾಗಿ ಗಮನಿಸಿದಾಗ ಅವರಲ್ಲಿ ಒಂದು ನಿರ್ಧಿಷ್ಟ ಗುರಿ ಅಥವಾ ಅದಮ್ಯವಾದ ಉತ್ಸಾಹವಿರುವುದನ್ನು
ಗಮನಿಸಬಹುದು. ಈ ರೀತಿಯ ಗುರಿ,
ಉತ್ಸಾಹವುಳ್ಳವರಲ್ಲಿ ಸಾಮಾನ್ಯವಾಗಿ ಅತಿ ಕಡಿಮೆ
ಒತ್ತಡವಿರುವುದನ್ನು ಕಾಣಬಹುದು.
ಹಾಗೂ ಅವರುಗಳು ದೀರ್ಘ ಜೀವನವನ್ನು ಸಾಗಿಸುವುದನ್ನು
ನೋಡಬಹುದು.
ಮೊದಲಿಗೆ
ನಮ್ಮ ಜೀವನದ ಉದ್ದೇಶದ ಬಗ್ಗೆ ಅರಿವಿಲ್ಲದಿದ್ದರೆ ಅರಿವನ್ನು ಗುರುತಿಸಿಕೊಳ್ಳಬೇಕು. ಗೊತ್ತು ಗುರಿಯಿಲ್ಲದ
ಜೀವನವನ್ನು ಸರಿಪಡಿಸಿಕೊಳ್ಳಬೇಕಿದ್ದರೆ ಒಂದು ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು, ಹಾಗೂ ಅದನ್ನು ತಲುಪಲು
ಶ್ರಮಿಸಬೇಕು. ಒಂದೇ ದಿನದಲ್ಲಿ ತಲುಪಲಾಗದ ಗುರಿಯನ್ನು ವಿಭಾಗಿಸಿ ಅದನ್ನು ತಲುಪಲು ಯೋಜನೆಯನ್ನು
ಸಿದ್ದಪಡಿಸಿ ಹೆಚ್ಚಿನ ಶ್ರಮವಿಲ್ಲದೆ ಅವುಗಳನ್ನು ತಲುಪಲು ಶ್ರಮಿಸುವುದು ಹಾಗೂ ಈ ಮಾರ್ಗದಲ್ಲಿ ಸಂಭ್ರಮವನ್ನು
ಅನುಭವಿಸಬಹುದು.
ನಾವು
ಮುಂಜಾನೆ ಏಳುವಾಗ ಉತ್ಸಾಹ, ಸಂಭ್ರಮದ ಮನಸ್ಥಿತಿಯಲ್ಲಿದ್ದಲ್ಲಿ ಆ ದಿನವು ಅತ್ಯಂತ ಸಂತೋಷದಿಂದ ಕೂಡಿರುತ್ತದೆ. ನಿರ್ಧಿಷ್ಟ ಗುರಿ
ಇದ್ದಲ್ಲಿ ಅದು ಉತ್ತಮ ಪ್ರೇರಣೆಯನ್ನು ನೀಡುತ್ತದೆ. ಉದಾಹರಣೆಗೆ ಒಬ್ಬ ಕವಿಗೆ ತಾನು ಮುಂಜಾನೆ ಎದ್ದ
ನಂತರ ಒಂದು ಹೊಸ ಕವನವನ್ನು ರಚಿಸಬೇಕೆಂಬ ಅದಮ್ಯ ಉತ್ಸಾಹ ಉಂಟಾದಲ್ಲಿ ಆ ದಿನ ಅವನಿಗೆ ಸಂತೋಷದ ದಿನವಾಗಿರುತ್ತದೆ
ಹಾಗೂ ಆ ಗುರಿಯನ್ನು ತಲುಪಲು ಉತ್ಕಟವಾಗಿ ಶ್ರಮಿಸುತ್ತಾನೆ.
ಜೀವನದಲ್ಲಿನ
ಗುರಿಯನ್ನು ಗುರುತಿಸಿಕೊಳ್ಳಲು ಈ ಕೆಳಗಿನ ನಾಲ್ಕು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡಲ್ಲಿ ಅವುಗಳು
ಸಹಕಾರಿಯಾಗುತ್ತವೆ.
1.
ನೀವು
ಯಾವ ಕೆಲಸವನ್ನು ಅತಿಯಾಗಿ ಪ್ರೀತಿಸುತ್ತೀರಾ?
ನಿಮ್ಮ ಜೀವನವನ್ನು ಯಾವುದು ಪ್ರೇರೇಪಿಸುವುದು? ನಿಮ್ಮ ಜೀವನದ ಹಿಂದಿರುವ
ಉತ್ಸಾಹ ಯಾವುದು?
2.
ನೀವು
ಯಾವ ರಂಗದಲ್ಲಿ ಪರಿಣತಿಯನ್ನು ಹೊಂದಿರುವಿರಿ?
ಈ ಪ್ರಶ್ನೆಯು ನಿಮ್ಮ ವೃತ್ತಿಗೆ ಸಂಬಂಧಿಸಿರುವುದು.
ಮೇಲಿನ
ಎರದೂ ಪ್ರಶ್ನೆಗೆ ನಿಮ್ಮ ಉತ್ತರವು ಒಂದೇ ಆಗಿದ್ದಲ್ಲಿ, ನೀವು ಅದೃಷ್ಟವಂತರು. ಒಂದೇ ಆಗಿಲ್ಲದಿದ್ದರೂ
ಅತಿಯಾಗಿ ಚಿಂತಿಸುವ ಅಗತ್ಯವಿಲ್ಲ.
ನೀವು ಯಾವ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿರುವಿರೋ
ಅದೇ ನಿಮಗೆ ಹಣವನ್ನು ತಂದುಕೊಡಬಹುದು ಹಾಗೂ ಅದರಿಂದ ನಿಮ್ಮ ಜೀವನದ ಗುರಿಯನ್ನು ಸಾಧಿಸಬಹುದು.
3.
ಪ್ರಪಂಚವು
ನಿಮ್ಮಿಂದ ಏನನ್ನು ನಿರೀಕ್ಷಿಸುತ್ತದೆ ಅಂದರೆ ನಿಮ್ಮ ಜೀವನದ ಬಹು ಮುಖ್ಯ ಗುರಿ ಅಥವಾ ಉದ್ದೇಶವೇನು? ಈ ಗುರಿಯನ್ನು ತಲುಪಲು
ನೀವು ಅನುಸರಿಸಬೇಕಾದ ಮಾರ್ಗಗಳು ಹಾಗೂ ತಲುಪಿದ ನಂತರ ನೀವು ಅನುಭವಿಸಬಹುದಾದ ತೃಪ್ತಿ.
4.
ನಿಮ್ಮಲ್ಲಿನ
ಯಾವ ವಿಶೇಷ ಲಕ್ಷಣವು ನಿಮಗೆ ಹಣವನ್ನು ತಂದುಕೊಡುತ್ತದೆ? ಅದು ನೀವು ಪ್ರಸ್ತುತದಲ್ಲಿನ
ಕೆಲಸವಾಗಿರಬಹುದು ಅಥವಾ ಆಗಿಲ್ಲದೇ ಇರಬಹುದು.
ಉದಾಹರಣೆಗೆ ಒಬ್ಬ ಕವಿಯು ಪ್ರಸ್ತುತದಲ್ಲಿ
ಒಂದು ಸಂಸ್ಥೆಯಲ್ಲಿ ಕೆಲಸಮಾಡುತ್ತಾ ಹಣವನ್ನು ಸಂಪಾದಿಸುತ್ತಿರಬಹುದು ಆದರೆ ಆತನ ಮುಖ್ಯ ಲಕ್ಷಣವು
ಕವನವನ್ನು ರಚಿಸುವುದು ಆಗಿರಬಹುದು.
ನಿಮ್ಮ
ಜೀವನದ ದೀರ್ಘಾವದಿ ಅಥವಾ ಅಲ್ಪಾವಧಿ ಗುರಿಯು ನೀವು ಮೇಲಿನ ಪ್ರಶ್ನೆಗೆ ಅಂದುಕೊಳ್ಳುವ ಉತ್ತರಗಳನ್ನು
ಅವಲಂಬಿಸುತ್ತದೆ.
ಒಬ್ಬ
ಸುಪ್ರಸಿದ್ದ ಸಿನಿಮಾ ನಟನು ಪ್ರತಿನಿತ್ಯ ಮುಂಜಾನೆ ಏಳುವುದಕ್ಕೆ ವ್ಯಕ್ತಪಡಿಸಿದ ಕಾರಣವೆಂದರೆ:
“ನನ್ನ ಮುದ್ದಿನ ಮಕ್ಕಳೇ ನಾನು ಪ್ರತಿದಿನ ಮುಂಜಾನೆ ಏಳುವುದಕ್ಕೆ ಕಾರಣ. ನಾನು ನನ್ನ ಪ್ರತಿದಿನ, ಪ್ರತಿಕ್ಷಣವೂ ಅವರುಗಳು
ಬೆಳೆಯುವುದನ್ನು ನೋಡುವುದೇ ಕಾರಣ.
ಈ ಕ್ಷಣಗಳು ಮತ್ತೆ ಮರುಕಳಿಸುವುದಿಲ್ಲ. ನನ್ನ ಮಕ್ಕಳು ನಾನು
ಜವಾಬ್ದಾರಿಯನ್ನು ಅರಿಯಲು ಅಲ್ಲದೇ ಅವರು ನನ್ನ ಜೀವನಕ್ಕೆ ಹೊಸ ದೃಷ್ಟಿಕೋನವನ್ನು ನೀಡುತ್ತಾರೆ. ಈ ಕ್ಷಣವು ನನ್ನ ಬಾಲ್ಯದ ದಿನಗಳನ್ನು ಮತ್ತೊಮ್ಮೆ ಅನುಭವಿಸಲು ಅನುಕೂಲ ಮಾಡಿಕೊಡುತ್ತದೆ.”
ಒಬ್ಬ
ಸುಪ್ರಸಿದ್ದ ಕಾದಂಬರಿಕಾರನ ಅನಿಸಿಕೆಯಂತೆ:
“ನಾನು ಪ್ರತಿನಿತ್ಯವೂ ಮುಂಜಾನೆ ಅತ್ಯಂತ ಹರ್ಷದಿಂದ ಏಳುವುದಕ್ಕೆ ಕಾರಣಗಳು
ಕಾಲ ಕಾಲಕ್ಕೆ ಬದಲಾಗುತ್ತಿರುವುದು.
ಸಧ್ಯಕ್ಕೆ ನಾನು ಬರೆಯುತ್ತಿರುವ ಕಾದಂಬರಿಯು
ಕಾರಣ. ಅದರಲ್ಲಿ ಬರುವ ಪಾತ್ರಗಳು ನನ್ನನ್ನು ಮುಂಜಾನೆ ಏಳಲು ಪ್ರರೇಪಿಸುತ್ತವೆ
ಹಾಗೂ ಅವರುಗಳ ಪ್ರಪಂಚದಲ್ಲಿ ನಾನು ತಲ್ಲೀನನಾಗುತ್ತೇನೆ.”
ಸಂಗೀತಗಾರನೊಬ್ಬನ
ಅನಿಸಿಕೆಯಂತೆ:
“ನಾನು ಮುಂಜಾನೆ ಏಳುವುದಕ್ಕೆ ಕಾರಣವೆಂದರೆ ನಾನು ಪ್ರತಿದಿನ ಯಾವುದನ್ನು
ಪ್ರೀತಿಸುತ್ತೇನೋ ಅದನ್ನು ಮಾಡಲು ಅದಮ್ಯ ಉತ್ಸಾಹವಿರುವುದರಿಂದ. ನಾನು ಹಾಡುತ್ತೇನೆ, ನಟಿಸುತ್ತೇನೆ, ಸುಂದರ ಸ್ಥಳಗಳಿಗೆ
ಭೇಟಿಕೊಡುತ್ತೇನೆ. ನಾನು ಇಷ್ಟಪಟ್ಟ ಜೀವನದಲ್ಲಿ ಜೀವಿಸುತ್ತೇನೆ. ನನ್ನನ್ನು ಪ್ರೀತಿಸಿದವರನ್ನು
ಸಂತೋಷವಾಗಿಡುವುದೇ ನಾನು ಪ್ರತಿದಿನ ಮುಂಜಾನೆ ಏಳುವುದಕ್ಕೆ ಕಾರಣ.”
ನನ್ನ
ಹಲವಾರು ಸ್ನೇಹಿತರು ಪ್ರತಿದಿನ ಮುಂಜಾನೆ ಏಳುವುದಕ್ಕೆ ಕಾರಣಗಳನ್ನು ನೀಡಿದ್ದನ್ನು ಈ ಕೆಳಗೆ ಪ್ರಸ್ತುತ
ಪಡಿಸಲು ಇಚ್ಛಿಸುತ್ತೇನೆ.
ನನ್ನ
ಇತ್ತೀಚಿನ ಚಾರಣದಲ್ಲಿ ಭಾಗವಹಿಸಿದ ಒಬ್ಬ ಚಾರಣಿಗನ ಅನಿಸಿಕೆ:
“ಕೆಲಸ,
ಆಹಾರ. ಸಂತೋಷವಂತೂ ಖಂಡಿತ
ಅಲ್ಲ.” “ಮುಖ್ಯವಾಗಿ ಜಾಗೃತವಾಗಿ ಉಸಿರಾಡುವುದಕ್ಕೆ ಹಾಗೂ ದೈಹಿಕ ವ್ಯಾಯಾಮವನ್ನು
ಮಾಡುವುದಕ್ಕೆ. ಸಾಮಾನ್ಯವಾಗೇ ನಾನು ಹಿಂದಿನ ದಿನ ಮಾರನೇ ದಿನ ಮಾಡಬೇಕಾದ ಕಾರ್ಯಗಳನ್ನು
ಯೋಜಿಸಿ, ಅದನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತೇನೆ. ರಾತ್ರೆ ಏನಾದರೂ
ಕನಸು ಕಂಡರೆ ಕೂಡಲೇ ಎದ್ದು ಅದನ್ನು ನೆನಪಿಸಿಕೊಳ್ಳುತ್ತೇನೆ. ಯಾರಾದರೂ ನನ್ನ ಸ್ನೇಹಿತರ ಬಗ್ಗೆ ಒಲವು ಉಂಟಾದಾಗ ಕೂಡಲೇ ಎದ್ದು ಅವರಿಂದ
ಯಾವುದಾದರೂ ಸಂದೇಶ ಬಂದಿದೆಯೇ ಎಂದು ಪರಿಶೀಲಿಸುತ್ತೇನೆ.”
ಮತ್ತೊಬ್ಬ
ಚಾರಣಿಗಳ ಪ್ರತಿಕ್ರಿಯೆಯು:
“ನಾನು ಪ್ರತಿದಿನ ಮುಂಜಾನೆ ಏಳುವುದಕ್ಕೆ ಕಾರಣವು ನಾನು ಎಲ್ಲಿರುವೆನು ಎಂಬುದರ
ಮೇಲೆ ಅವಲಂಬಿಸಿರುತ್ತದೆ. ಚಾರಣದಲ್ಲಿದ್ದರೆ
ನಾನು ಬೆಳಗ್ಗೆ ಏಳುವುದು ಸೂರ್ಯೋದಯವನ್ನು ವೀಕ್ಷಿಸಲು. ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ನಾನು ಏಳುವುದು ಶೇಕಡಾ ೭೫ ರಷ್ಟು ಹಾಜರಾತಿಯನ್ನು
ಪಡೆಯಲು. ಮನೆಯಲ್ಲಿದ್ದಾಗ ನಾನು ಏಳುವುದು ನನ್ನ ತಾಯಿ, ತಂದೆಯವರ ಜೊತೆಗೆ
ಚಹಾವನ್ನು ಸೇವಿಸಲು”.
ನಮ್ಮ ಕಾಲೇಜಿನ ಗೆಳೆಯರ
ಪ್ರತಿಕ್ರಿಯೆಗಳು ಈ ರೀತಿ ಇವೆ:
ಶ್ರೀಮತಿ ಇಂದಿರಾ ಅವರ
ಪ್ರತಿಕ್ರಿಯೆ:
“ನನ್ನ ಜೀವನದ ಉಳಿದ ದಿನಗಳಲ್ಲಿ ನಾನು ಮಾಡಬೇಕಾದ ಕಾರ್ಯಗಳು ಇನ್ನೂ ಇರುವುದು ಹಾಗೂ ಅವುಗಳು
ಯಾವುವು ಎಂಬುದು ತಿಳಿಯದಾದರೂ ಅವುಗಳು ತಾನಾಗಿಯೇ ಎದುರಾಗುತ್ತವೆ. ನಮ್ಮ ಬಾಲ್ಯದ ದಿನಗಳಿಂದ ಇಲ್ಲಿಯವರೆಗಿನ ಪ್ರಯಾಣವನ್ನು ಗಮನಿಸಿದಾಗ
ನಾವು ಮಾಡಿದ ಕೆಲವು ಕಾರ್ಯಗಳನ್ನು ಮಾಡುತ್ತೇವೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಉದಾಹರಣೆಗೆ ೧೫ ವರ್ಷಗಳ ಹಿಂದೆ ನಾನು ಜರ್ಮನಿಯು ಎಲ್ಲಿರುವುದೆಂದು ಭೂಪಟದಲ್ಲಿ ಮಾತ್ರ ನೋಡಿದ್ದೆನೇನೋ. ಆದರೆ ಈಗ ನಾನು ಅಲ್ಲಿಗೆ ಆರನೇ ಬಾರಿಗೆ ಹೋಗುತ್ತಿದ್ದೇನೆ ಹಾಗು
ಸಿಂಗಪುರಕ್ಕೆ ನಾಲ್ಕು ಬಾರಿ ಹೋಗಿರುವೆ. ಮುಂಜಾನೆ ಎದ್ದು ವ್ಯಾಯಾಮ, ನಡೆದಾಟ ಮತ್ತು ಪ್ರಾಣಾಯಾಮ ಮಾಡುತ್ತಿರುವಾಗ ಅನಿಸುವುದೇನೆಂದರೆ ಇವುಗಳನ್ನು ಕೆಲವು ವರ್ಷಗಳ
ಹಿಂದೆ ನಾನು ಮಾಯುತ್ತಿರಲಿಲ್ಲವಾದರೂ ಈಗ ಹೌದು ಇವುಗಳೇ ನಾನು ಮುಂಜಾನೆ ಏಳುವುದಕ್ಕೆ ಕಾರಣವೆಂದು
ಹಾಗೂ ಇವುಗಳಿಗಾಗಿಯೇ ನಾನು ಜೀವಿಸಿರುವುದೆಂದು. ಆದ್ದರಿಂದ ನಾವು ಮುಂಜಾನೆ
ಏಳುವುದು ನಮ್ಮ ಕರ್ಮಗಳನ್ನು ಅಕ್ಷರಶಃ ಹಾಗೂ ಆಧ್ಯಾತ್ಮಿಕವಾಗಿ ಸವೆಸಲು. ನಮ್ಮ ಸಂಚಿತ ಕರ್ಮಗಳಿಗೆ ಅಂಟಿಕೊಂಡಿರುವ ಅನೇಕರನ್ನು ನಾವು
ಸಂಧಿಸಬೇಕಾಗುವುದರಿಂದ ಅವುಗಳನ್ನು ಮುಗಿಸುವವರೆಗೂ ನಾವು ಪ್ರತಿದಿನ ಮುಂಜಾನೆ ಏಳುತ್ತಿರಬೇಕು.”
No comments:
Post a Comment