ನೂತನ ವರ್ಣವ್ಯವಸ್ಥೆ
ನಮ್ಮ ದೇಶದಲ್ಲಿನ ಹೈಕೋರ್ಟ್ / ಸುಪ್ರೀಮ್ ಕೋರ್ಟುಗಳ ಇತ್ತೀಚಿನ ತೀರ್ಪುಗಳನ್ನು ಪ್ರತಿಬಾರಿ
ಓದಿದಾಗಲೂ ನಮಗೆ ಒಂದು ರೀತಿಯ ಭಯವುಂಟಾಗುವುದು. ಮುಂದೇನು? ಎಂಬ ಪ್ರಶ್ನೆಯು ಧುತ್ತೆಂದು
ನಮ್ಮ ಮುಂದೆ ಬರುವುದು. ಉದಾಹರಣೆಗೆ - ಪ್ರಕರಣವೊಂದರಲ್ಲಿ
ಒಬ್ಬ ಅಂಚೆ ಪೇದೆಯನ್ನು ಅವನು ರೂ.57/- ನ್ನು ಕದ್ದನೆಂಬ ಅಪಾದನೆಯಿಂದ ಅವನನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. 29 ವರ್ಷಗಳ ಅಂದರೆ ಅವನ ನಿವೃತ್ತಿಯ ವಯಸ್ಸಾದ 3 ವರ್ಷಗಳ ನಂತರ ಅವನನ್ನು ನಿರಪರಾಧಿಯೆಂದು ನ್ಯಾಯಾಲಯವು ತೀರ್ಮಾನವನ್ನು
ನೀಡಿತು. ಮತ್ತೊಂದು ಪ್ರಕರಣದಲ್ಲಿ
ಗುತ್ತಿಗೆಯೊಂದನ್ನು ಅನುಮೋದಿಸಿದ ಸರ್ಕಾರವೇ ಹತ್ತು ವರ್ಷಗಳ ನಂತರ ಅದನ್ನು ಅಕ್ರಮವೆಂದು ಘೋಷಿಸಿತು. ಈ ಆದೇಶವನ್ನು ನ್ಯಾಯಾಲಯವು 20 ವರ್ಷಗಳ ನಂತರ ಸರ್ಕಾರದ ಘೋಷಣೆಯನ್ನು ವಜಾಗೊಳಿಸಿತು. ಇನ್ನೊಂದು ಪ್ರಕರಣದಲ್ಲಿ ಕಟ್ಟಡವೊಂದನ್ನು ಅದು ಕಟ್ಟಿದ 30 ವರ್ಷಗಳ ನಂತರ ಅಕ್ರಮವೆಂದು ನ್ಯಾಯಾಲಯವು ಘೋಷಿಸಿತು. ಹಾಗೇ ಸಹಾಯಕಿ ವೈದ್ಯೆಯಮೇಲೆ ನಡೆದ ಲೈಂಗಿಕ ಅತ್ಯಾಚಾರ, ಹೆಣ್ಣು ಮಗಳೊಬ್ಬಳನ್ನು ಮನೆಯಲ್ಲಿ ಕೂಡಿಹಾಕುವುದು, ಬಡವರ ಹಕ್ಕನ್ನು ಹತ್ತಿಕ್ಕುವುದು ಹೀಗೆ ಒಂದೇ, ಎರಡೇ! ಇದು ಭಯಪಡಿಸುವಂತಹ ಪರಿಸ್ಥಿತಿ. ಯಾವುದನ್ನಾದರೂ, ಯಾರನ್ನಾದರೂ ಯಾವಾಗ ಬೇಕಾದರೂ ಅಕ್ರಮವೆಂದು ಬಹುತೇಕವಾಗಿ ನ್ಯಾಯಾಲಯವು ವಿಚಿತ್ರ ರೀತಿಯಲ್ಲಿ (ಕ್ರಮವಾದ ಪ್ರಕ್ರಿಯೆಗಳನ್ನು ಅನುಸರಿಸಿದ ನಂತರ) ಘೋಷಿಸಿಬಿಡಬಹುದು.
ನಮ್ಮ ನ್ಯಾಯಾಲಯಗಳು
ಇಂದು ಯಾರು ಗಂಡಸು, ಯಾರು ಹೆಂಗಸು, ಯಾರು ಬಡವ, ಯಾರು ಶ್ರೀಮಂತ, ಯಾರು ಬಾಲಾಪರಾಧಿ, ಯಾರು ಪ್ರೌಢ, ಯಾವ ಲೈಂಗಿಕ ವರ್ತನೆಯು
ಸರಿಯಾದದ್ದು ಮತ್ತು ಯಾವುದು ಸರಿಯಲ್ಲ, ಅತ್ಯಾಚಾರವೆಂದರೇನು ಮತ್ತು ಅನುಮತಿ ಎಂದರೇನು ಎಂಬುದನ್ನು ತೀರ್ಮಾನಿಸುವುದು. ಇದು ಆಶ್ಚರ್ಯ ಪಡಬೇಕಾದದ್ದೇನಲ್ಲ, ಏಕೆಂದರೆ ನಮ್ಮ ದೇಶದ ನಿರ್ಮಾತೃಗಳೆಲ್ಲರೂ (ಗಾಂಧಿ, ನೆಹರು, ಪಟೇಲ್, ರಾಜಗೋಪಾಲಾಚಾರಿ, ರಾಜೇಂದ್ರ ಪ್ರಸಾದ್, ಅಂಬೇಡ್ಕರ್) ನ್ಯಾಯವಾದಿಗಳೇ. ಈ ನ್ಯಾಯ ಸಂಹಿತೆಗಳು
ಸುಭದ್ರ ದೇಶವನ್ನು ಸೃಷ್ಟಿಸುವುದು. ಈ ನ್ಯಾಯ ಸಂಹಿತೆಗಳು ಜಾರಿಗೆ ಬರುವ ಮೊದಲು ದೇಶದಲ್ಲಿ ಗೊಂದಲ, ಅರಾಜಕತೆ ಹಾಗೂ ದಬ್ಬಾಳಿಕೆಯ ಪರಿಸ್ಥಿತಿ ಇತ್ತು. ಈಗ ಎಷ್ಟೋ ಉತ್ತಮ, ಅಲ್ಲವೇ! ನಿಜವಾಗಿಯೂ ಹಾಗನ್ನಿಸುವುದೇ?
ಒಮ್ಮೆ ನಾನು ನನ್ನ
ಸ್ನೇಹಿತನೊಬ್ಬನಿಗೆ ಋಗ್ವೇದದಲ್ಲಿ ವಿವರಿಸಿರುವ ವರ್ಣಪದ್ಧತಿಯು ಈಗಿನ ಸಮಾಜದಲ್ಲೂ ಆಚರಣೆಯಲ್ಲಿದೆ
ಎಂದೆ. ವೇದಸೂಕ್ತ (ಪುರುಷ ಸೂಕ್ತ)ದ ಪ್ರಕಾರ ಪ್ರತಿಯೊಂದು ಸಮಾಜವೂ ಒಂದು ಜೀವಿಯಂತಿದ್ದು, ಅದರ ಶಿರವು ಸಮಾಜವನ್ನು ಮುನ್ನಡೆಸುವ ಬ್ರಾಹ್ಮಣರಿಂದ ಮಾಡಲ್ಪಟ್ಟು (ಬುದ್ಧಿಜೀವಿಗಳು), ತೋಳುಗಳನ್ನು ಸಮಾಜವನ್ನು ರಕ್ಷಿಸುವ ಕ್ಷತ್ರಿಯರಿಂದ, ಸೊಂಟಭಾಗವನ್ನು ಸಮಾಜಕ್ಕೆ ಆಹಾರವನ್ನೊದಗಿಸುವ (ವರ್ತಕ) ವೈಶ್ಯರಿಂದ ಹಾಗೂ ಕೊನೆಯದಾಗಿ ಕಾಲುಗಳು ಸಮಾಜವನ್ನು ಸೇವಿಸುವ (ಸೇವಕರು) ಶೂದ್ರರಿಂದ ಕೂಡಿರುವುದು. ಅನೇಕ ಸಮಾಜ ಸುಧಾರಕರು ಈ ವಿಧದ ಚಾತುರ್ವರ್ಣ ವ್ಯವಸ್ಥೆಯು ಭಾರತೀಯ ಸಮಾಜದ ಸಮಸ್ತ ಕೆಟ್ಟ
ಅಭ್ಯಾಸಗಳಿಗೆ ಮೂಲವೆಂದು ಹಾಗೂ ಇದು ಬ್ರಾಹ್ಮಣರಿಗೇ ಹೆಚ್ಚಿನ ಸವಲತ್ತುಗಳನ್ನು ನೀಡುವುದೆಂದು ಹಾಗೂ
ಈ ಪದ್ಧತಿಯು ಸಂಪೂರ್ಣವಾಗಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದೆಂದು ನಂಬಿರುವರು.
ಆದರೆ, ನವಭಾರತವು ಪ್ರಜಾಸತ್ತೆಯಿಂದಾಗಿ ಅಥವಾ ಪ್ರಜಾಸತ್ತ ರಾಷ್ಟ್ರವಾಗಿದ್ದೂ
ಇದೇ ಚಾತುರ್ವರ್ಣದ ಮಾದರಿಗೆ ಮರಳಿ ಬಂದಿದೆ. ನಮ್ಮ ರಾಷ್ಟ್ರದಲ್ಲಿ ನ್ಯಾಯವಾದಿಗಳು ಮತ್ತು ನ್ಯಾಯಾಧೀಶರುಗಳು ಜೀವಿಯ ಶಿರ (ಯಾವುದು ಸರಿ ಅಥವಾ ತಪ್ಪು ಎಂಬುದನ್ನು ತೀರ್ಮಾನಿಸುವ ಹಿಂದಿನ
ಪುರೋಹಿತರಂತೆ ಇರುವ ನವ ಬ್ರಾಹ್ಮಣರು), ರಾಜಕಾರಣಿಗಳು ಅದರ ತೋಳುಗಳು (ತಮ್ಮ ಕಾರ್ಯವನ್ನು ಸಾಧಿಸಿಕೊಳ್ಳಲು ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತಿದ್ದ ಹಿಂದಿನ ರಾಜರುಗಳಂತೆ
ಇರುವ ನವ ಕ್ಷತ್ರಿಯರು), ಕೈಗಾರಿಕೋದ್ಯಮಿಗಳು, ಉದ್ಯಮಿಗಳು ಹಾಗೂ ವಾಣಿಜ್ಯೋದ್ಯಮಿಗಳು ಇದರ ಸೊಂಟ (ಆರ್ಥಿಕ ಶಕ್ತಿಯನ್ನು ಹೊಂದಿದ್ದ ಹಿಂದಿನ ವರ್ಣ ವ್ಯವಸ್ಥೆಯ
ವರ್ತಕರಂತೆ ಇರುವ ನವ ವೈಶ್ಯರು), ಅನಂತರ ಬರುವುದೇ ನವೀನ-ಶೂದ್ರರು -ಮಾನವ ಹಕ್ಕುಗಳಿಗೆ, ನಾಗರಿಕ ಹಕ್ಕುಗಳಿಗೆ, ಪರಿಸರ ಸಂರಕ್ಷಕರು, ಸ್ತ್ರೀ ಹಕ್ಕುಗಳ ಹೋರಾಟಗಾರರು, ಮಕ್ಕಳು, ಅಂಗವಿಕಲರು, ವಿಲಕ್ಷಣ ವ್ಯಕ್ತಿಗಳು, ಹಿರಿಯ ನಾಗರೀಕರು, ಹೆಂಗಸರು ಇವರುಗಳು - ಅಧಿಕಾರ, ಅಂತಸ್ತು ಮತ್ತು ಶಕ್ತಿಗಳನ್ನು ಹೊಂದಿರುವ ಮೇಲ್ವರ್ಗದವರಿಗೆ ಸವಾಲನ್ನು ಒಡ್ಡುವವರು.
ನಮ್ಮ ಪ್ರಜಾಸತ್ತೆಯಲ್ಲಿ, ನೂತನ ವರ್ಣವ್ಯವಸ್ಥೆಯಲ್ಲಿನ ಯಾರೊಬ್ಬರು ಒಂದು ವರ್ಣ (ವರ್ಗ)ದಿಂದ ಮತ್ತೊಂದು ವರ್ಣಕ್ಕೆ ವಲಸೆ ಹೋಗಬಹುದು. ಅಷ್ಟರ ಮಟ್ಟಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಇದಕ್ಕೆ ನಮ್ಮ ಕಾಲದಲ್ಲೇ ಹಲವಾರು ಉದಾಹರಣೆಗಳನ್ನು ನೋಡಬಹುದು.
ನನ್ನ ಸ್ನೇಹಿತನು ಪರಿಸರವಾದಿ
ಹಾಗೂ ಚಳುವಳಿಗಾರನಾದ್ದರಿಂದ ನಾನು ಸೂಚಿಸಿದ ನೂತನ ವರ್ಣವ್ಯವಸ್ಥೆಯಿಂದಾಗಿ ತೀವ್ರವಾಗಿ ಅಸಮಾಧಾನಗೊಂಡನು. ನನ್ನ ನೂತನ ವರ್ಣವ್ಯವಸ್ಥೆಯಿಂದಾಗಿ ಅವನು ಪರಿಸರವಾದಿ ಹಾಗೂ
ಚಳುವಳಿಗಾರನಾಗಿದ್ದರಿಂದ ಅವನು ಶೂದ್ರ ವರ್ಣಕ್ಕೆ ಸೇರಿದವನಾಗಿದ್ದನು. ಆದರೆ ಅವನಿಗೆ ತನ್ನನ್ನು ಶೂದ್ರನೆಂದು ಕರೆಸಿಕೊಳ್ಳುವುದು ಸುತರಾಂ
ಇಷ್ಟವಿರಲಿಲ್ಲ, ಏಕೆಂದರೆ ಅದು ವರ್ಗಶ್ರೇಣಿಯಲ್ಲಿ
ತಳಹಂತದಲ್ಲಿದ್ದದ್ದರಿಂದ. ಆದರೆ ಅವನಿಗೆ ತನ್ನನ್ನು ಆಧುನಿಕ ಬ್ರಾಹ್ಮಣ ಎಂದು ವಿಂಗಡಿಸುವುದೂ ಅಷ್ಟೇನೂ ಹಿತವಾಗುತ್ತಿರಲಿಲ್ಲ.
ಹಾಗೇ ನ್ಯಾಯಾಧೀಶರು
ಹಾಗೂ ನ್ಯಾಯವಾದಿಗಳಿಗೂ ತಮ್ಮನ್ನು ಆಧುನಿಕ ಬ್ರಾಹ್ಮಣ ಎಂದು ಕರೆಸಿಕೊಳ್ಳುವುದು ಇಷ್ಟವಾಗದೇ ಇರಬಹುದು.
ಹಾಗಾದರೆ ನನ್ನ ಈ ನೂತನ
ವರ್ಣವ್ಯವಸ್ಥೆಯ ಕಲ್ಪನೆಯೇ ಸರಿಯಿಲ್ಲವೇ ಎಂದು ಯೋಚಿಸುತ್ತಾ ಕಣ್ತೆರೆದು ನೋಡುತ್ತೇನೆ, ಆಗಲೇ ಸೂರ್ಯನು ಉದಯಿಸಿ ಒಂದು ಘಂಟೆಯಾಗಿದೆ, ನಾನಿನ್ನೂ ಮುಂಜಾನೆಯ ಕಣಸಿನಲ್ಲೇ ಮುಳುಗಿದ್ದೆ.
No comments:
Post a Comment