Friday, 8 March 2019

ಕರ್ಮ - ಒಂದು ವಿಶ್ಲೇಷಣೆ



ಕರ್ಮ - ಒಂದು ವಿಶ್ಲೇಷಣೆ

ನಿಮ್ಮ ಕರ್ಮವನ್ನು ಬದಲಿಸುವ ಮೂಲಕ ನಿಮ್ಮ ಹಣೆಬರಹವನ್ನು ಮಾರ್ಪಡಿಸಬಹುದೇ?

ಪ್ರತಿ ಕ್ಷಣದಲ್ಲೂ ನಾವು ಹೊಸ ಹೊಸ ಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ ಮತ್ತು ನಮ್ಮ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಪ್ರತಿಯೊಂದು ಯೋಚನೆಗಳು ಮೂರ್ತರೂಪ ಪಡೆಯಲೇಬೇಕೆಂದು ಕರ್ಮ ಸಿದ್ದಾoತದಲ್ಲೊಂದುಕಡೆ ಪ್ರಸ್ತುತ ಪಡಿಸಲಾಗಿದೆ. ಉದಾಹರಣೆಗೆ ವ್ಯಕ್ತಿಯೊಬ್ಬನು ಒಬ್ಬ ಹುಡುಗಿಯನ್ನು ನೋಡಿ ಮನಸ್ಸಿನಲ್ಲಿ ಅವಳೇ ತನ್ನ ಮಡದಿಯಾಗಬೇಕೆಂಬ ಯೋಚನೆಯು ಉತ್ಪತ್ತಿಯಾದರೆ ಅದು ಜನ್ಮದಲ್ಲಿ ಮೂರ್ತರೂಪ ಪಡೆಯದೇ ಹೋದರೆ, ಮುಂದಿನ ಜನ್ಮದಲ್ಲಿ ಅದು ಪ್ರಾರಬ್ಧ ಕರ್ಮವಾಗುತ್ತದೆಯೇ ಹಾಗೂ ಹುಡುಗಿಯು ತನ್ನ ಮುಂದಿನ ಜನ್ಮದಲ್ಲಿ ಅವನ ಮಡದಿಯಾಗುತ್ತಾಳೆಯೇ?

ಕರ್ಮದ ಬಗೆಗಿನ ಪರಿಕಲ್ಪನೆಯು ಒಬ್ಬನ ಅನಿಸಿಕೆಗಳು ಹಾಗೂ ಆಲೋಚನೆಗಳಿಗಿಂತ ವಾಸ್ತವವಾಗಿ ಭಿನ್ನವಾಗಿರುತ್ತದೆ ಅಲ್ಲದೇ ಅಂತಹ ಪರಿಕಲ್ಪನೆಗಳನ್ನು ಅರ್ಥೈಸುವುದು ಕಷ್ಟಕರವಾದದ್ದು. ಕರ್ಮವನ್ನು ಆಗಾಮಿ ಕರ್ಮ, ಸಂಚಿತ ಕರ್ಮ, ಹಾಗೂ ಪ್ರಾರಬ್ಧ ಕರ್ಮಗಳೆಂದು ವಿಂಗಡಿಸಬಹುದು. ಇದಲ್ಲದೇ ವೈಯುಕ್ತಿಕ, ಸಾಮಾಜಿಕ, ಸಮಷ್ಟಿ ಕರ್ಮ, ಹಾಗೂ ಸಾರ್ವತ್ರಿಕ ಕರ್ಮಗಳೂ ಉಂಟು.

ನಾವೆಲ್ಲಾ ಮನಸ್ಸಿನಲ್ಲೇ ಏನೇನೋ ವಿಷಯಗಳನ್ನು ಸೃಷ್ಟಿಸುತ್ತೇವೆ ಮತ್ತು ಚಿoತಿಸುತ್ತೇವೆ. ಹಾಗೆಂದ ಮಾತ್ರಕ್ಕೆ ನಮ್ಮ ಚಿoತನೆಗಳಲ್ಲಿ / ವಿಷಯಗಳಲ್ಲಿ ಬರುವ ವ್ಯಕ್ತಿಗಳು ನಮ್ಮ ಚಿoತನೆಗಳ / ಆಸೆಗಳಂತೆ ವರ್ತಿಸವೇಕೆಂದೇನಿಲ್ಲ.  ನಮ್ಮ ಜೀವಿತದ ಅವಧಿಯಲ್ಲಿ ಹಲವಾರು ವ್ಯಕ್ತಿಗಳು ನಮ್ಮೊಂದಿಗೆ ಬಂದು ಹೋಗುತ್ತಾರೆ. ನಾವು ಅವರುಗಳೊಂದಿಗೆ ಜೀವಿಸುತ್ತೇವೆ, ಅಧ್ಯಯನ ಮಾಡುತ್ತೇವೆ, ವಿವಾಹವಾಗುತ್ತೇವೆ ಅಥವಾ ಅವರೊಂದಿಗೆ ಇರುತ್ತೇವೆ. ವಿಧದ ಒಡನಾಟ ಕಾರಣಾoತರದಿಂದ ಸಾಧ್ಯವಾಗದಿದ್ದಾಗ ಆತ ಅಥವಾ ಆಕೆಯು ಮತ್ತೊಮ್ಮೆ ನಮ್ಮ ಗಂಡ ಅಥವಾ ಹೆಂಡತಿಯಾಗುತ್ತಾರೆಯೇ? ಹಾಗಾದ ಪಕ್ಷದಲ್ಲಿ ನಮಗೆ ಹತ್ತು ಗಂಡ ಅಥವಾ ಹೆಂಡತಿ ಇರಬೇಕಾಗುತ್ತದೆ. ಏಕೆಂದರೆ ನಮ್ಮ ಇಷ್ಟ - ಅನಿಷ್ಟಗಳು ಕಾಲಕಾಲಕ್ಕೆ ಸತತವಾಗಿ ಬದಲಾಗುತ್ತಿರುತ್ತದೆ.  ನಾವು ನಮ್ಮ ಮನಸ್ಸಿನಲ್ಲೇ ಹಲವಾರು ವಿಷಯಗಳನ್ನು ಚಿoಟಿಸುತ್ತಿರುತ್ತೇವೆ ಹಾಗೂ ಹಲವಾರು ಸಂದರ್ಭಗಳನ್ನು ಸೃಷ್ಟಿಸುತ್ತಿರುತ್ತೇವೆ ಹಾಗೂ ಪ್ರತಿಕ್ಷಣದಲ್ಲೂ ನಾವು ಕರ್ಮಗಳನ್ನು ಸೃಷ್ಟಿಸುತ್ತಿರುತ್ತೇವೆ ಹಾಗೆಯೇ ಅವುಗಳನ್ನು ನಾಶಪಡಿಸುತ್ತಿರುತ್ತೇವೆ. 

ಮೇಲೆ ವಿವರಿಸಿದ ಉದಾಹರಣೆಯು ಸರಿಯಾದದ್ದಲ್ಲ. ಏಕೆಂದರೆ ಅದು ಒಂದು ಪಕ್ಷದಲ್ಲಿ ನಿಜವಾಗಿದ್ದೇ ಆದರೆ, ಅದೇ ರೀತಿಯಲ್ಲಿ ನಿಮ್ಮ ತಂದೆ, ತಾಯಿಯರ ವಿಷಯದಲ್ಲಿ ಅಥವಾ ನಿಮ್ಮ ಮಕ್ಕಳ ವಿಷಯದಲ್ಲಿ ಕೂಡಾ ನಿಜವಾಗಬಹುದು ಏಕೆಂದರೆ ವಿಷಯದಲ್ಲಿ ನಮ್ಮ ಮನಸ್ಸಿನಲ್ಲಿ ಸೃಷ್ಟಿಯಾಗುವ ಅಥವಾ ಚಿoತನೆಗಳು ಏಕ ರೀತಿಯಲ್ಲಿರುತ್ತದೆ.  ಕರ್ಮ ಸಿದ್ದಾoತದ ಪ್ರಕಾರ ಕರ್ಮ ನಿವಾರಣೆಯು ಸಹಜ ಪ್ರಕ್ರಿಯೆಯಾಗಿರುತ್ತದೆ.  ನಮ್ಮಲ್ಲಿ ಉಂಟಾಗುವ ಯೋಚನೆಗಳ ವಿಷಯದಲ್ಲೂ ಇದೇ ರೀತಿ ಇರುತ್ತದೆ. ಎಷ್ಟೋ ಬಾರಿ ನಾವು ಮನಸ್ಸಿನಲ್ಲಿ ಕೆಲವು ವಿಷಯಗಳನ್ನು ಯೋಚಿಸುತ್ತೇವೆ / ಸೃಷ್ಟಿಸುತ್ತೇವೆ ಹಾಗೆ ಮರುಕ್ಷಣವೇ ಅದನ್ನು ತೆಗೆದು ಹಾಕುತ್ತೇವೆ ಹಾಗೆಯೇ ಮತ್ತೊಂದು ಯೋಚನೆಯು ಸೃಷ್ಟಿಯಾಗುತ್ತದೆ. ವಿಧವಾದ ಪ್ರಕ್ರಿಯೆಯಾ ಚಕ್ರವು ಉರುಳುತ್ತಲೇ ಇರುತ್ತದೆ.

ಹಾಗಿಲ್ಲದ ಪಕ್ಷದಲ್ಲಿ ಎಲ್ಲ ಯೋಚನೆಗಳು ಅಥವಾ ನಾವು ಸೃಷ್ಟಿಸಿದ ವಿಷಯಗಳನ್ನು ನಮ್ಮ ಮನಸ್ಸಿನಲ್ಲೇ ಉಳಿಸಿಕೊಂಡರೆ ನಾವು ಹುಚ್ಚರಾಗಬೇಕಾಗುತ್ತದೆ. ಏಕೆಂದರೆ ನಮಗೆ ನಮ್ಮ ಕರ್ಮಗಳನ್ನು ಪ್ರಜ್ಞಾಪೂರ್ವಕವಾಗಿ  ನಿವಾರಿಸಿಕೊಳ್ಳುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ವಿಧದ ನಿವಾರಣೆಯು ಹೊಸ ಕ್ರಿಯೆಗಳಿಂದಲೋ, ಧ್ಯಾನದಿಂದಲೋ, ಭಕ್ತಿಯಿಂದಲೋ ಅಥವಾ ಜ್ಞಾನಾರ್ಜನೆಯಿಂದಲೋ ತಿಳಿದಿರುವುದಿಲ್ಲ. ಇದನ್ನು ಹೇಗೆ ನಿವಾರಣೆಮಾಡುವುದು? ಯಾವ ವಿಧದ ಪ್ರಕ್ರಿಯೆಯಿಂದ? ಆಂತರಿಕವಾಗಿ ಕೆಲವು ನಿವಾರಣೆಯಾಗುತ್ತಿರುತ್ತದೆ, ಬದಲಾವಣೆಯಾಗುತ್ತಿರುತ್ತದೆ ಮತ್ತು ನಮ್ಮ ಸಂಚಿತ ಕರ್ಮವು ನಾಶವಾಗುತ್ತಿರುತ್ತದೆ. (ಸಂಚಿತ ಕರ್ಮವೆಂದರೆ ನಮ್ಮ ದೈನಂದಿನ ಜೀವನದಲ್ಲಿ ಶೇಖರಣೆಯಾಗುವ ಕರ್ಮಗಳು).  ಹೀಗೆ oತರಿಕವಾಗಿ ಕೆಲವು ಕರ್ಮವು ನಿವಾರಣೆಯಾಗಿ ಕೊನೆಗೆ ನಮ್ಮ ಜೀವನಕ್ಕೆ ಆಳವಾಗಿ ಪರಿಣಾಮ ಬೀರುವ ಕರ್ಮಗಳು ಮಾತ್ರ ಉಳಿದುಕೊಳ್ಳುತ್ತವೆ.

ಬಹುತೇಕ ಕರ್ಮಗಳು ಉದಾಹರಣೆಗೆ ವಾಸ್ತವ ಪ್ರಪಂಚವು ಕಂಡುಕೊಳ್ಳುವ, ಕಾಲಾನುಭವಗಳು, ಬೌತಿಕಾನುಭವಗಳು, ಪ್ರಜ್ಞಾನುಭವಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.  ಇವುಗಳಿಂದ ಹೊರತಾದ ಕರ್ಮಗಳನ್ನು ನಿರ್ವಹಿಸುವುದು ಕಷ್ಟಕರವಾದದ್ದು. ಇದನ್ನೇ ವಿಧಿಯ ಕರ್ಮ ಅಥವಾ ಪ್ರಾರಬ್ಧ ಕರ್ಮ ಎಂದು ಕರೆಯಬಹುದು.

ಕೇವಲ ಒಬ್ಬ ವ್ಯಕ್ತಿಯು ತನ್ನ ಗುರುವಾಗಬೇಕೆಂದು, ಅಥವಾ ಪತಿ, ಪತ್ನಿಯಾಗಬೇಕೆಂದು ಮನಸ್ಸಿನಲ್ಲಿ ಯೋಚಿಸುವುದರಿಂದ ಪ್ರಾರಬ್ಧ ಕರ್ಮವು ಸೃಷ್ಟಿಯಾಗುವುದಿಲ್ಲ. ಅದು ಕೇವಲ ಯೋಚನೆಯಾಗಿರುತ್ತದೆಯೇ ಹೊರತು ಅದು ಕಾರ್ಯಗತವಾಗುವುದಿಲ್ಲ. ಒಂದು ವೇಳೆ ಕಾರ್ಯಗತವಾಗಬೇಕೆಂದಿದ್ದಲ್ಲಿ ಅದು ಸಾಧ್ಯವಾಗುವುದು ಯಾವಾಗ ಎಂದರೆ ನೀವು ನಿಮಗೆ ಸಂಬಂಧಿಸಿದ ಹಾಗೂ ನೀವು ಯೋಚಿಸಿದ ವ್ಯಕ್ತಿಯ ಕರ್ಮಚಕ್ರವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದ್ದಾಗ ಮಾತ್ರ. ಅದು ನೀವು ಆತ್ಮ ಜ್ಞಾನಿಯಾಗಿದ್ದಲ್ಲಿ ಅಥವಾ ಸಂಪೂರ್ಣವಾಗಿ ಬುದ್ಧಿ ಭ್ರಮಿತ ವ್ಯಕ್ತಿಯಾದಾಗ ಮಾತ್ರ. ಇವೆರಡರ ಮಧ್ಯದಲ್ಲಿ ಇರುವ ವ್ಯಕ್ತಿಗಳಿಗೆ ಇದು ಅಸಾಧ್ಯ.

ಬಿಹಾರ ಸ್ಕೂಲ್ ಆಫ್ಹ್ ಯೋಗ ಕೃಪೆ - ಕನ್ನಡಕ್ಕೆ ಭಾಷಾoತರಿಸಿದವರು - ಗುರುಪ್ರಸಾದ್ ಹಾಲ್ಕುರಿಕೆ             

ಓದುಗರ ಪ್ರಶ್ನೆ:

ಸಂಚಿತ ಕರ್ಮಗಳು ಒಟ್ಟಾಗಿ ನಾಶವಾಗಲು ಸಾಧ್ಯವೆಂಬ ಕುತೂಹಲಕರ ಚಿoತನೆಯಿದೆ. ತಾರ್ಕಿಕವಾಗಿ ಇದು ಹೇಗೆ ಸಾಧ್ಯ? ತಿಳಿಪಡಿಸುವ ಮಾಹಿತಿಯಿದೆಯೇ?

ಉತ್ತರ
ಸಂಚಿತ ಕರ್ಮಗಳು ಒಟ್ಟಾಗಿ ನಾಶವಾಗುವ ಸಾಧ್ಯತೆ ಇಲ್ಲವೆಂದಲ್ಲ ಆದರೆ ಅದು ಅತಿ ವಿರಳ.  ಹತ್ತಾರು ಕೋಟಿಗೊಬ್ಬರ ವಿಷಯದಲ್ಲಿ ಅದು ಸಾಧ್ಯವಾಗಬಹುದು.
ತಾರ್ಕಿಕವಾಗಿ ಇದರ ಸಾಧ್ಯತೆಗೆ ನನ್ನ ವಿವರಣೆ ಹೀಗಿದೆ:

ಮೊದಲನೆಯ ವಿವರಣೆ:

ನಾನು ವಿವರಿಸಿದ ಉದಾಹರಣೆಯ ಪ್ರಕಾರ - ಸಂಚಿತ ಕರ್ಮವು ಬ್ಯಾಂಕ್ ಬ್ಯಾಲೆನ್ಸ್
ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗಬೇಕಾದರೆ: ()  ಡಿಪಾಸಿಟ್ / ಕ್ರೆಡಿಟ್ ಇಲ್ಲವಾಗಬೇಕು. ()  ಕೇವಲ ಡೆಬಿಟ್/ವಿಥ್ಡ್ರಾವಲ್ ಆಗಬೇಕು.  ಕೆಲವು ಸಮಯದ ನಂತರ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗುತ್ತದೆ.

ಡಿಪಾಸಿಟ್ / ಕ್ರೆಡಿಟ್ ನ್ನು ಆಗಾಮಿ ಕರ್ಮಕ್ಕೆ ಹೋಲಿಸಬಹುದು.  ಆಗಾಮಿ ಕರ್ಮ ಇಲ್ಲವಾಗುವ ಸ್ಥಿತಿ ಹೇಗೆ ಸಾಧ್ಯ. ಇದು ಅತ್ಯಂತ ವಿರಳ.
ಮನುಷ್ಯನಲ್ಲಿ ಉತ್ಪತ್ತಿಯಾಗುವ ಆಸೆಗಳೇ ಆಗಾಮಿ ಕರ್ಮವಾಗಿ ಪರಿವರ್ತಿತವಾಗುತ್ತದೆ. ಇವುಗಳ ಪೈಕಿ ಈಡೇರದ ಆಸೆಗಳು ಆಗಾಮಿ ಕರ್ಮವಾಗಿ ಸಂಚಿತ ಕರ್ಮಕ್ಕೆ ಸೇರಿಕೊಳ್ಳುತ್ತದೆ.
ಆಸೆಗಳಲ್ಲಿ ಪ್ರಾಪಂಚಿಕ ಹಾಗೂ ಪಾರಮಾರ್ಥಿಕ ಆಸೆಗಳೆಂಬ ಎರಡು ವಿಧಗಳಿರುತ್ತವೆ. ಎರಡು ವಿಧಗಳ ಆಸೆಗಳು ಸಂಚಿತಕರ್ಮವಾಗುತ್ತವೆ.
ಆಸೆಗಳಲ್ಲಿ ಸತ್ವ, ರಜೋ, ಹಾಗೂ ತಮೋಗುಣದಂಥವಾಗಿರಬಹುದು. ಸತ್ವಗುಣದಂಥ ಆಸೆ ಇದ್ದಪಕ್ಷದಲ್ಲಿ ಅದು ನಿಸ್ವಾರ್ಥದಿಂದ ಕೂಡಿರುತ್ತದೆ. ಇಂತಹ ಆಸೆಗಳಲ್ಲಿ ಪ್ರತಿಫಲಾಪೇಕ್ಷೆ ಇರುವುದಿಲ್ಲ.  ಹಾಗಾಗಿ ವಿಧದ ಆಸೆಗಳು ಸಂಚಿತ ಕರ್ಮಕ್ಕೆ ಸೇರಿಕೊಳ್ಳುವುದಿಲ್ಲ. ಸೇರಿಕೊಂಡರೂ ಅದು ಪ್ರಾರಬ್ಧ ಕರ್ಮವಾಗಿ ಪರಿವರ್ತಿತವಾಗದೇ ಇರಬಹುದು. ಹಾಗಾದ ಪಕ್ಷದಲ್ಲಿ ಸಂಚಿತ ಕರ್ಮವು ಹೆಚ್ಚಲಾಗುವುದಿಲ್ಲ. ಇದು ಒಂದು ರೀತಿ ಕಾಲ್ಪನಿಕ (Notional)  ಕ್ರೆಡಿಟ್/ಡಿಪಾಸಿಟ್ ಆಗಬಹುದು.    

ಎರಡನೇ ವಿವರಣೆ:

ಮನುಷ್ಯನು ತಾನು ಮಾಡುವ ಎಲ್ಲ ವಿಧವಾದ ಕರ್ಮಗಳನ್ನು ಭಗವಂತನಿಗೆ ಸಮರ್ಪಿಸಿ ನಿಸ್ವಾರ್ಥ ಭಾವದಿಂದ ಜೀವನ ನಡೆಸುವ ಸ್ಥಿತಿಯಲ್ಲಿದ್ದರೆ - ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿರುವಂತೆ ಎಲ್ಲ ಕ್ರಿಯೆಗಳನ್ನೂ ಭಗವಂತನಿಗೆ ಅರ್ಪಿಸಿದ ಪಕ್ಷದಲ್ಲಿ ಭಗವಂತನೇ ಅವನ ಎಲ್ಲ ಸಂಚಿತ ಕರ್ಮಗಳನ್ನು ಇಲ್ಲವಾಗಿಸಬಹುದು. ಪುರಾಣ / ಪುಣ್ಯ ಕತೆಗಳಲ್ಲಿ ಇದಕ್ಕೆ ಕೆಲವು ಉದಾಹರಣೆಯನ್ನು ಗಮನಿಸಬಹುದು. ಸಂತ ತುಕಾರಾಮರಿಗೆ ಸಶರೀರಿಯಾಗಿ ಸ್ವರ್ಗಲೋಕಕ್ಕೆ ತೆರಳಿದ ಸಂದರ್ಭವನ್ನು ನಾವು ಓದಿರಬಹುದು. ಸಂತ ತುಳಸಿದಾಸರು, ಸಮರ್ಥ ರಾಮದಾಸರು, ಇನ್ನು ಅನೇಕ ಉದಾಹರಣೆಗಳಿವೆ. ಇಷ್ಟೇಕೆ ಮಹಾಭಾರತದ ಧರ್ಮರಾಯನೂ ಸಹ ಇದೇ ರೀತಿ ಸ್ವರ್ಗವನ್ನು ತಲುಪಿದನೆಂದು ಉಲ್ಲೇಖವಿದೆ. ಇನ್ನು ಅನೇಕ ಸಂತರ ಉದಾಹರಣೆಗಳನ್ನು ನೆನಪಿಸಿಕೊಳ್ಳಬಹುದು.

ಗುರುಪ್ರಸಾದ್ ಹಾಲ್ಕುರಿಕೆ







No comments:

Post a Comment

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ ಹಿಂದೂ ಧರ್ಮದ ಇತಿಹಾಸವು 5000 ವರ್ಷಗಳಿಗೂ ಹಿಂದಕ್ಕೆ ಹರಡಿದೆ ಮತ್ತು ಎಂಟು ಹಂತಗಳಾಗಿ ಒಂದರಲ್ಲೊಂದು ಸೇರಿಕೊಂಡಂತ...