Friday, 8 March 2019

ಕರ್ಮವನ್ನು ನಿವಾರಿಸಿಕೊಳ್ಳುವ ಬೌದ್ಧಿಕ ಮಾರ್ಗ


ಕರ್ಮವನ್ನು ನಿವಾರಿಸಿಕೊಳ್ಳುವ ಬೌದ್ಧಿಕ ಮಾರ್ಗ

ಕೆಲವರು ಹುಟ್ಟಿನಿಂದಲೇ ಎಲ್ಲ ಭೋಗ ಭಾಗ್ಯಗಳನ್ನು ಪಡೆದಿರುತ್ತಾರಾದರೆ ಮತ್ತೆ ಕೆಲವರು ತಮ್ಮ ದೈನಂದಿನ ಅಗತ್ಯತೆಗಳನ್ನು ಸಂಪಾದಿಸಲು ಕಷ್ಟಪಡುತ್ತಿರುತ್ತಾರೇಕೆ? ಕೆಲವರಿಗೆ ಬೆಳ್ಳಿಯ ಚಮಚದ ಭಾಗ್ಯವಿದ್ದರೆ, ಮತ್ತೆ ಕೆಲವರಿಗೆ ಒಂದು ಸಣ್ಣ ಬ್ರೆಡ್ಡಿನ ತುಂಡೂ ಸಿಗುವುದಿಲ್ಲವೇಕೆ? ಇವುಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯವೇ! ಇದನ್ನು ಯಾರು ನಿರ್ಧರಿಸುತ್ತಾರೆ? ನಾವುಗಳು ಸುಮ್ಮನೆ ವಿಧಿಲಿಖಿತವನ್ನು ಅನುಸರಿಸುತ್ತೇವೆಯೇ?

ಶಂಕರ ಭಗವತ್ಪಾದರುನಾನಾರೆಂಬುದನ್ನುಆಳವಾಗಿ ಆಲೋಚಿಸಿದರು. ಭಗವಾನ್ ಬುದ್ಧನು ಮಗುವೊಂದನ್ನು, ಮುದುಕನೊಬ್ಬನನ್ನು ಹಾಗೂ ಪಾರ್ಥಿವ ಶರೀರವೊಂದನ್ನು ಕಂಡು ಕುತೂಹಲಗೊಂಡು ಅದಕ್ಕೆ ಉತ್ತರವನ್ನು ಹುಡುಕುತ್ತಾ ಮುಕ್ತಿಯನ್ನು ಹೊಂದಿದನು.

ಕರ್ಮ, ಭಾರತೀಯ ಭಾಷೆಯಲ್ಲಿ ಒಂದು ಅತೀoದ್ರಿಯ ಪದ ಹಾಗು ಆಂಗ್ಲಭಾಷೆಯಲ್ಲೂ ಇದನ್ನು ಅಳವಡಿಸಿಕೊಳ್ಳಲಾಗಿದೆ. ಇದನ್ನು ಕ್ರಿಯೆ - ಪ್ರತಿಕ್ರಿಯೆ ಅಥವಾ ಕಾರಣ-ಪರಿಣಾಮ ತತ್ವವೆಂದೂ ಅರ್ಥೈಸಬಹುದು.

ಪ್ರತಿಯೊಂದು ಶರೀರದ ಭಾಗವನ್ನೂ ಚುಚ್ಚುತ್ತಿದ್ದ ಬಾಣದ ಮಂಚದ ಮೇಲೆ ಮಲಗಿದ್ದ ಭೀಷ್ಮನು ನೋವಿನಿಂದ ನರಳುತ್ತಾ ಈ ವಿಧದ ಶೋಚನೀಯ ಸ್ಥಿತಿಗೆ ತಾನು ಯಾವ ಮಾಡಿದ ಯಾವ ಕ್ರಿಯೆಯು ಕಾರಣವಾಗಿರಬಹುದೆಂದು ವೈಚಿಸುತ್ತಿದ್ದನುಯೋಚಿಸುತ್ತಿದ್ದನು. ಹೀಗಿರುವಾಗ ಕೃಷ್ಣನಲ್ಲಿನಾನು ನನ್ನ ಹಿಂದಿನ ೭೨ ಜನ್ಮಗಳ ಅವಧಿಯನ್ನು ಕೂಲಂಕುಷವಾಗಿ ಪರಿಶೀಲಿಸಿದರೂ ನಾನು ಇಲ್ಲಿ ಹೀಗೆ ಶೋಚನೀಯ ಸ್ಥಿತಿಯಲ್ಲಿ ಮಲಗಿರಲು ಯಾವುದೇ ಸಣ್ಣ ತಪ್ಪನ್ನೂ ಹುಡುಕಲಾಗಲಿಲ್ಲ”.

ಆಗ ಶ್ರೀಕೃಷ್ಣನು ಭೀಷ್ಮನಿಗೆ ಅವನ ೭೩ನೇ ಹಿಂದಿನ ಜನ್ಮದಲ್ಲಿ ಸಣ್ಣ ಹುಡುಗನಾಗಿದ್ದಾಗ ಹುಡುಗಾಟದಿಂದ ಚೂಪಾದ ಮುಳ್ಳಿನಿಂದ ಒಂದು ಕೀಟವನ್ನು ಚುಚ್ಚಿರುವನೆಂದು ಹಾಗೂ ಆ ಕ್ರಿಯೆಯು ಈಗಿನ ಸ್ಥಿತಿಗೆ ಕಾರಣವೆಂದು ವಿವರಿಸಿದನು.

ಪರಮಹಂಸ ಯೋಗಾನಂದರುಕಾರ್ಯವನ್ನು ಮಾಡುವ ಮೊದಲು ಅದನ್ನು ಮಾಡುವವನಿಗೆ ಸ್ವಾತಂತ್ರ್ಯವಿರುತ್ತದೆ, ಆದರೆ ಕಾರ್ಯವನ್ನು ಮಾಡಿದನಂತರ, ಅದರ ಫಲವನ್ನು ನಿಮಗೆ ಬೇಕಾಗಲಿ ಅಥವಾ ಬೇಡವಾದರೂ ಅನುಭವಿಸಲೇಬೇಕು. ಇದು ಕರ್ಮ ಸಿದ್ಧಾಂತದ ನಿಯಮ”.

ಹೇಗೆ ಬಿಲ್ಲಿನಿಂದ ಹೊರಬಂದ ಬಾಣವನ್ನು ಹಿಂಪಡೆಯಲು ಸಾಧ್ಯವಿಲ್ಲವೋ, ಅದೇ ರೀತಿ ಕ್ರಿಯೆಗಳೂ ಕೂಡಾ ಒಳ್ಳೆಯದೇ ಅಥವಾ ಕೆಟ್ಟದ್ದೇ ಆದರೂ ಅದರಿಂದ ಕರ್ಮವು ಸ್ವಯಂಚಾಲಿತವಾಗಿ ಉತ್ಪತ್ತಿಯಾಗುತ್ತದೆ.

ಆದರೆ ಈ ವಿಧದ ಕರ್ಮ ಫಲಗಳನ್ನು ತಗ್ಗಿಸಿಕೊಳ್ಳಲು, ಸಂಪೂರ್ಣವಾಗಿ ನಿವಾರಿಸಿಕೊಳ್ಳಲು  ಅನೇಕ ಮಾರ್ಗಗಳುಂಟು. ವೈಫಲ್ಯಗಳನ್ನುಅದು ನನ್ನ ಕರ್ಮ, ಅದನ್ನು ನಿವಾರಿಸಿಕೊಳ್ಳಲು ಅಸಾಧ್ಯ, ನಾನು ಯಾವುದರಲ್ಲೂ ಸಫಲನಾಗುವುದಿಲ್ಲಎಂಬ ವೈಫಲ್ಯವನ್ನು ಸ್ವೀಕರಿಸುವುದರ ಬದಲಾಗಿ, ಸಕಾರಾತ್ಮಕ ಚಿಂತನೆಯಿಂದ ಪೂರ್ವ ಕರ್ಮಗಳ ಪ್ರಭಾವವನ್ನು ಕಡಿಮೆಗೊಳಿಸಬಹುದು.         

ನಮ್ಮ ಸಂಸ್ಕಾರದ ಪ್ರಭಾವಕ್ಕೊಳಗಾಗದೇ ನಮ್ಮ ಜೀವನದಲ್ಲಿ ಸರಿಯಾದ ಆಯ್ಕೆಗಳನ್ನು ಮಾಡಿಕೊಳ್ಳಲು ಜ್ಞಾನವು ಸಹಕಾರಿಯಾಗುತ್ತದೆ. ಇದು ನಮ್ಮಲ್ಲಿನ ಕೆಟ್ಟ ಹವ್ಯಾಸಗಳನ್ನು ವಿರೋಧಿಸಲು ಸ್ಫೂರ್ತಿನೀಡುತ್ತದೆ.  ತಾರತಮ್ಯ ಹಾಗೂ ಜ್ಞಾನವು ನಮ್ಮ ಸುತ್ತ ಇರುವ ಜನಗಳನ್ನು ಅರ್ಥಮಾಡಿಕೊಳ್ಳಲು ಅಲ್ಲದೇ ನಮ್ಮ ಜೊತೆಗಾರರನ್ನು ಆರಿಸಲು ಸಹಕಾರಿಯಾಗುತ್ತದೆ. 


No comments:

Post a Comment

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ ಹಿಂದೂ ಧರ್ಮದ ಇತಿಹಾಸವು 5000 ವರ್ಷಗಳಿಗೂ ಹಿಂದಕ್ಕೆ ಹರಡಿದೆ ಮತ್ತು ಎಂಟು ಹಂತಗಳಾಗಿ ಒಂದರಲ್ಲೊಂದು ಸೇರಿಕೊಂಡಂತ...